ಬೆಂಗಳೂರು: ಲೋಕಸಭಾ, ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್ ದಿ. ಸುರೇಶ್ ಅಂಗಡಿ ಪತ್ನಿಗೆ ನೀಡಲಾಗಿದೆ.
- ಮಂಗಳ ಸುರೇಶ್ ಅಂಗಡಿ- ಬೆಳಗಾವಿ ಕ್ಷೇತ್ರ (ಲೋಕಸಭೆ)
- ಪ್ರತಾಪ್ ಗೌಡ ಪಾಟೀಲ್-ಕರ್ನಾಟಕ-ಮಸ್ಕಿ ಕ್ಷೇತ್ರ(ವಿಧಾನಸಭೆ)
- ಶರಣು ಸಲಾಗರ್-ಕರ್ನಾಟಕ-ಬಸವಕಲ್ಯಾಣ ಕ್ಷೇತ್ರ (ವಿಧಾನಸಭೆ)
ಒಂದು ಲೋಕಸಭಾ ಕ್ಷೇತ್ರವಾದ ಬೆಳಗಾವಿ ಮತ್ತು ವಿಧಾನ ಸಭಾ ಕ್ಷೇತ್ರಗಳಾದ ಬೀದರ್ ನ ಬಸವ ಕಲ್ಯಾಣ ಮತ್ತು ಮಾಸ್ಕಿ ವಿಧಾನ ಸಭಾ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಚುನಾವಣೆ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ. ಇನ್ನು ಈ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 31ರವರೆಗೆ ಕಾಲಾವಾಕಾಶ ನೀಡಲಾಗಿದ್ದು, ಈ ಚುನಾವಣೆಗಳ ಫಲಿತಾಂಶವನ್ನ ಮೇ 2ರಂದು ಪ್ರಕಟವಾಗುತ್ತೆ ಎಂದು ಆಯೋಗ ಮಾಹಿತಿ ನೀಡಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದ ಸುರೇಶ್ ಅಂಗಡಿಯವರ ಹಾಗೂ ಬಸವ ಕಲ್ಯಾಣ ವಿಧಾನ ಸಭಾ ಕ್ಷೆತ್ರದಿಂದ ಆಯ್ಕೆಯಾಗಿದ್ದ ಬಿ.ನಾರಾಯಣ ರಾವ್ ಅವರ ನಿಧನದಿಂದ, ಮಸ್ಕಿ ವಿಧಾನ ಸಭಾ ಕ್ಷೇತ್ರಿಂದ ಪ್ರತಾಪ್ ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ಉಪಚುನಾವಣೆ ನಡೆಯುತ್ತಿದೆ.



