ಡಿವಿಜಿ ಸುದ್ದಿ, ಹರಪನಹಳ್ಳಿ: ಎತ್ತ ನೋಡಿದರೂ ನೀರು, ಆ ನೀರಿನ ನಡುವೆ ಸಿಕ್ಕಿ ಹಾಕಿಕೊಂಡಿರೋ ಬಸ್.. ಆ ಬಸ್ ನಲ್ಲಿದ್ದ 40 ಜನ ಪ್ರಾಣ ರಕ್ಷಣೆಗಾಗಿ ಕೂಗಲಾರಂಭಿಸಿದರು. ಎರಡು ದಂಡೆಯಲ್ಲಿ ನಿಂತಿದ್ದ ಯುವಕರು ಹೇಗಾದ್ರೂ ಮಾಡಿ 40 ಜನ ಸೇವ್ ಮಾಡೋ ಪಣ ತೊಟ್ಟು.. ಕೊನೆಗೆ ನೀರಿನಲ್ಲಿ ಈಜಿ ಹೋಗಿ 40 ಜನರನ್ನು ಸೇವ್ ಮಾಡಿದ್ದಲ್ಲದೆ, ಬಸ್ ಅನ್ನು ಹೊರಗೆದಿದ್ದಾರೆ.
ತಾಲೂಕಿನ ಹಲುವಾಗಲು ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಖಾಸಗಿ ಬಸ್ ಮತ್ತು 40 ಜನರನ್ನು ಊರಿನ ಯುವಕರ ಸಹಾಸದಿಂದ ಹೊರಗೆ ತೆಗೆದ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಹಲುವಾಗಲು ಗ್ರಾಮದಿಂದ ಮೈಲಾರಕ್ಕೆ ಹೊರಟ್ಟಿದ್ದ ಖಾಸಗಿ ಬಸ್ ಗರ್ಭಗುಡಿ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಸಿಲುಕಿಕೊಂಡಿತ್ತು.
ಚಾಲಕ ನಿರ್ಲಕ್ಷ್ಯತನದಿಂದ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬಸ್ ಚಲಾಯಿಸಿದ್ದಾನೆ. ನೀರಿನ ಮಧ್ಯೆ ಭಾಗದಲ್ಲಿ ಹೋದ ತಕ್ಷಣ ಬಸ್ ಆಫ್ ಆಗಿದೆ. ಆಗ ಪ್ರಯಾಣಿಕರೆಲ್ಲಾ ಆತಂಕಗೊಂಡಿದ್ದು ಕೂಗಲಾರಂಭಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಕರೆ ತಂದರು. ನಂತರ ಹಗ್ಗದಿಂದ ಟ್ರ್ಯಾಕ್ಟರ್‌ಗೆ ಬಸ್ ಕಟ್ಟಿ ಎಳೆಸಿಕೊಂಡು ಬಸ್‌ನ್ನನ್ನು ಹೊರಗೆ ತಂದು ಸಹಾಸ ಮೆರೆದಿದ್ದಾರೆ.