ದಾವಣಗೆರೆ: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ನೀಡುವ 2020ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆಯುವ ಪಟ್ಟಿ ಪ್ರಕಟಿಸಲಾಗಿದ್ದು, ದಾವಣಗೆರೆ ಜಿಲ್ಲಾ ಮೀಸಲು ಪಡೆಯ ಎಆರ್ ಎಸ್ಐ ಅಜ್ಜಯ್ಯ ಬಿ.ಕೆ ಅವರು ಆಯ್ಕೆಯಾಗಿದ್ದಾರೆ. ಅಜ್ಜಯ್ಯ ಅವರ ಆಯ್ಕೆಗೆ ಎಸ್ ಪಿ ಹನುಮಂತರಾಯ ಅವರು ಶುಭಕೋರಿದ್ದಾರೆ.
ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ,ಪಿಐ,ಪಿಎಸ್ ಐ,ಎಎಸ್ಐ ,ಹೆಚ್ ಸಿ,ಕಾನ್ಸ್ ಟೇಬಲ್ ಸೇರಿದಂತೆ ಒಟ್ಟು 115 ಮಂದಿಗೆ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.