ದಾವಣಗೆರೆ: ಮುಂಬರುವ ದಿನಗಳಲ್ಲಿ ನೀರು ಅತ್ಯಂತ ಮಹತ್ವದ ಸಂಪನ್ಮೂಲವಾಗಲಿದ್ದು, ಪ್ರಸ್ತುತ ವಿಶ್ವದಲ್ಲಿ ಮೂರರಲ್ಲಿ ಒಬ್ಬರಿಗೆ ಶುದ್ಧನೀರಿನ ಕೊರತೆ ಇದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ದೇವರಾಜ ಟಿ.ಎನ್ ಅಭಿಪ್ರಾಯಪಟ್ಟರು.
ಮಹೇಶ್ ಪದವಿಪೂರ್ವ ಕಾಲೇಜ್ನಲ್ಲಿ ಆಯೋಜಿಸಿದ್ದ ‘ವಿಶ್ವಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1993 ರಿಂದಲೂ ವಿಶ್ವಜಲ ದಿನಾಚರಣೆಯನ್ನು ಪ್ರಪಂಚದೆಲ್ಲಡೆ ಆಚರಿಸುತ್ತದೆ. ಪ್ರಸ್ತುತ ವಿಶ್ವದಲ್ಲಿ ಮೂರರಲ್ಲಿ ಒಬ್ಬರಿಗೆ ಶುದ್ಧನೀರಿನ ಕೊರತೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣಿಸುವ ಎಲ್ಲಾ ಲಕ್ಷಣಗಳಿವೆ ಎಂದರು.
ನೀರನ್ನು ಪ್ರಯೋಗಾಲೆಯಗಳಲ್ಲಿ ತಯಾರಿಸಲು ಸಾಧ್ಯವಿಲ್ಲದಿರುವುದರಿಂದ ಪ್ರತಿಯೊಬ್ಬ ನಾಗರೀಕರು ನೀರನ್ನು ಮಿತವಾಗಿ ಬಳಸುವುದರ ಜೊತೆಗೆ ಸಂರಕ್ಷಣೆಗೆ ಮುಂದಾಗಬೇಕೆಂದರು. ಪ್ರಾಂಶುಪಾಲರಾದ ಡಾ. ಸಂತೋಷ್ ರವರು ಮಾತನಾಡಿ ಜಲ ಸಂರಕ್ಷಣೆ ಬಗ್ಗೆ ಯುವ ಜನರಿಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದರು, ಕಾರ್ಯಕ್ರಮದಲ್ಲಿ ವಿಸ್ತರಣಾ ತಜ್ಞರಾದ ಶ್ರೀ ರಘುರಾಜ ಜೆ., ಕಾಲೇಜಿನ ಶಿಕ್ಷ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.