Connect with us

Dvgsuddi Kannada | online news portal | Kannada news online

ಕೃಷಿ ಉದ್ದೇಶಕ್ಕೆ ಪಡೆದ ಸಾಲವನ್ನು ಬಡ್ಡಿ ರಿಯಾಯಿತಿಯಲ್ಲಿ ಮರು ಪಾವತಿಸಲು ಮಾ.31 ಕೊನೆಯ ದಿನ

ಪ್ರಮುಖ ಸುದ್ದಿ

ಕೃಷಿ ಉದ್ದೇಶಕ್ಕೆ ಪಡೆದ ಸಾಲವನ್ನು ಬಡ್ಡಿ ರಿಯಾಯಿತಿಯಲ್ಲಿ ಮರು ಪಾವತಿಸಲು ಮಾ.31 ಕೊನೆಯ ದಿನ

ದಾವಣಗೆರೆ: ಕೃಷಿ ಉದ್ದೇಶದಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಸಾಲಗಾರರು ಸರ್ಕಾರ  ಬಡ್ಡಿ ಮನ್ನಾ ಯೋಜನೆ ನೀಡಿದಾಗ್ಯೂ ಪಡೆದ ಸಾಲವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿದ ಸಾಲಗಾರರು ಮಾ.31 ರೂಳಗೆ ಪೂರ್ತಿ ಸುಸ್ತಿ ಹಾಗೂ ಕಂತಿನ ಹಣ ಪಾವತಿಸಬೇಕು ಎಂದು ಸೂಚಿಸಲಾಗಿದೆ.

ಬ್ಯಾಂಕಿನಿಂದ ಕೃಷಿ ಉದ್ದೇಶಗಳಿಗೆ ಸಾಲ ಪಡೆದು ಇದೇ ತಿಂಗಳ ಅಂತ್ಯಕ್ಕೆ ದಿನಾಂಕ: 31-03-2021ರೊಳಗೆ ಶೇ. 3% ಬಡ್ಡಿ ದರದಲ್ಲಿ ಕಂತಿನ ಹಣ ಪಾವತಿಸಿದಲ್ಲಿ ಮಾತ್ರ ಸರ್ಕಾರದ ಬಡ್ಡಿ ರಿಯಾಯ್ತಿ ತಮಗೆ ದೊರೆಯುತ್ತದೆ. ತಪ್ಪಿದಲ್ಲಿ ಪೂರ್ತಿ ಬಡ್ಡಿಯೊಂದಿಗೆ ಇತರೇ ವೆಚ್ಚಗಳೊಂದಿಗೆ ಪಾವತಿಸಬೇಕಾಗುತ್ತದೆ. ಕಾರಣ ಸರ್ಕಾರದ ರಿಯಾಯಿತಿ ಪಡೆದು ತಕ್ಷಣ ಕಂತಿನ ಹಣ ಪಾವತಿಸಲು ಸೂಚಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ರೈತರು ಇಂತಹ ಕ್ರಮಗಳಿಗೆ ಅವಕಾಶ ನೀಡದೆ ತಕ್ಷಣ ಈ ಸುಸ್ತಿ ಮೊತ್ತ ಪಾವತಿಸಿ ಶೇ. 3 ರ ಬಡ್ಡಿ ದರದಲ್ಲಿ ಹೊಸ ಸಾಲ ಪಡೆದುಕೊಳ್ಳುವಂತೆ ಜಗಳೂರು ತಾಲ್ಲೂಕಿನ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಬಿ. ಸಿದ್ದೇಶ್ ಹಾಗೂ ವ್ಯವಸ್ಥಾಪಕ ಟಿ.ಎನ್ ಭೂಷಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top