ನವದೆಹಲಿ: ಫಾಸ್ಟ್‌ಟ್ಯಾಗ್ ಮೂಲಕ ದೈನಂದಿನ ಟೋಲ್ ಸಂಗ್ರಹವು ಹೆಚ್ಚಿದ್ದು, ಪ್ರತಿದಿನ ಸರಾಸರಿ 100 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗ ತಿಳಿಸಿದೆ.
ಕೇಂದ್ರ ಸರ್ಕಾರ ಫೆಬ್ರವರಿ 15ರ ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದ್ದು, ಫಾಸ್ಟ್‌ಟ್ಯಾಗ್ ಅಳವಡಿಸದ ಯಾವುದೇ ವಾಹನಕ್ಕೆ ದೇಶಾದ್ಯಂತ ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ಎರಡು ಪಟ್ಟು ಟೋಲ್ ವಿಧಿಸಲಾಗುತ್ತದೆ. ಮಾರ್ಚ್ 16, 2021ರಿಂದ, 3 ಕೋಟಿಗಿಂತ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ.
ಫಾಸ್ಟ್‌ಟ್ಯಾಗ್ ಮೂಲಕ ಸರಾಸರಿ ದೈನಂದಿನ ಶುಲ್ಕ ಸಂಗ್ರಹವು 2021 ಮಾರ್ಚ್ 1 ರಿಂದ 2021 ಮಾರ್ಚ್ 16 ರವರೆಗೆ 100 ಕೋಟಿ ರೂ.ಗಳಿಗಿಂತ ಹೆಚ್ಚಾಗಿದ ಎಂದು ರಸ್ತೆ ಸಾರಿಗೆ, ಹೆದ್ದಾರಿಗಳು ಮತ್ತು ಎಂಎಸ್‌ಎಂಇಗಳ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸೆಂಟ್ರಲ್ ಮೋಟಾರು ವಾಹನ ನಿಯಮಗಳು, 1989 ರ ತಿದ್ದುಪಡಿಯ ಮೂಲಕ 2021 ರ ಜನವರಿ 1 ರಿಂದ ಫಾಸ್ಟ್‌ಟ್ಯಾಗ್ ಅಳವಡಿಸಲು ಸರ್ಕಾರ ಕಡ್ಡಾಯಗೊಳಿಸಿದೆ. ಫಾಸ್ಟ್‌ಟ್ಯಾಗ್ ಮೂಲಕ ತನ್ನ ದೈನಂದಿನ ಟೋಲ್ ಸಂಗ್ರಹವು ಇತ್ತೀಚೆಗೆ ಪ್ರತಿದಿನ 100 ಕೋಟಿ ರೂಪಾಯಿಗೆ ಅಧಿಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.