ಡಿವಿಜಿ ಸುದ್ದಿ , ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ನಾಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಗುತ್ತಿದೆ.
ಸತತ ಮೂರು ವರ್ಷಗಳಿಂದ ಅಕ್ಟೋಬರ್ 23 ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಣೆ ಮಾಡಿಕೊಂಡು ಬಂದಿದ್ದು, ಪ್ರತಿ ವರ್ಷದಂತೆ ನಾಳೆ ಬೆಳೆಗ್ಗೆ10 ಘಂಟೆಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಚೆನ್ನಮ್ಮನ ಫೋಟೋಗೆ ಪೂಜೆಯನ್ನು ಮಾಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಈ ಜಯಂತಿಯಲ್ಲಿ ಗ್ರಾಮದ ಎಲ್ಲಾ ಸಮಾಜದ ಬಂಧುಗಳು, ಚುನಾಯಿತ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ಮುಖಂಡರು ತಿಳಿಸಿದ್ದಾರೆ.