Connect with us

Dvgsuddi Kannada | online news portal | Kannada news online

ಭಾರತೀಯ ಸೇನೆ ಸೇರುವ ಆಸೆ ಇದ್ಯಾ..? ಇಲ್ಲಿದೆ ಸುವರ್ಣಾವಕಾಶ ..!

ಪ್ರಮುಖ ಸುದ್ದಿ

ಭಾರತೀಯ ಸೇನೆ ಸೇರುವ ಆಸೆ ಇದ್ಯಾ..? ಇಲ್ಲಿದೆ ಸುವರ್ಣಾವಕಾಶ ..!

ಬೆಂಗಳೂರು: ಭಾರತೀಯ ಸೇನೆ ಸೇರಬೇಕು ಎನ್ನುವ ಆಸೆ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ.  ವಿವಿಧ ಹುದ್ದೆಗಳ ನೇಮಕಾತಿಗಾಗಿ ರ್ಯಾಲಿ ನಡೆಸುತ್ತಿದ್ದು, ಪಾಲ್ಗೊಳ್ಳಲು ಇಚ್ಛಿಸುವರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

  • ಹುದ್ದೆಗಳು
  • ಸೋಲ್ಜರ್ ಜನರಲ್ ಡ್ಯೂಟಿ
  • ಸೋಲ್ಜರ್ ಟೆಕ್ನಿಕಲ್
  • ಸೋಲ್ಜರ್ ಟ್ರೇಡ್ಸ್‍ಮನ್ (ಚೆಫ್ ವಾಷರ್‍ಮನ್) (ಎಸ್ಸೆಸ್ಸೆಲ್ಸಿ)
  • ಸೋಲ್ಜರ್ ಟ್ರೇಡ್ಸ್‍ಮನ್ (ಮೆಸ್ ಕೀಪರ್, ಹೌಸ್ ಕೀಪರ್) (8ನೇ ತರಗತಿ)
  • ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್, ಇನ್ವೆಂಟರಿ ಮ್ಯಾನೇಜ್‍ಮೆಂಟ್
  • ಸೋಲ್ಜರ್ ಟೆಕ್ನಿಕಲ್- ನರ್ಸಿಂಗ್ ಅಸಿಸ್ಟೆಂಟ್, ನರ್ಸಿಂಗ್ ಅಸಿಸ್ಟೆಂಟ್ ವೆಟರ್ನರಿ

 ಸೋಲ್ಜರ್ ಜನರಲ್ ಡ್ಯೂಟಿಗೆ 10ನೇ ತರಗತಿ ಪಾಸಾಗಿದ್ದು, ಕನಿಷ್ಠ ಶೇ.45 ಅಂಕ ಪಡೆದಿರಬೇಕು. ಟೆಕ್ನಿಕಲ್ ಹಾಗೂ ಟೆಕ್ ನರ್ಸಿಂಗ್ ಹುದ್ದೆಗಳಿಗೆ 12ನೇ ತರಗತಿಯಲ್ಲಿ ವಿಜ್ಞಾನ ವ್ಯಾಸಂಗ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಕ್ಲರ್ಕ್, ಸ್ಟೋರ್ ಕೀಪರ್ ಮೊದಲಾದ ಹುದ್ದೆಗಳಿಗೆ 12ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ.

ಎಲ್ಲ ಹುದ್ದೆಗಳಿಗೂ ಕನಿಷ್ಠ 17 ವರ್ಷ ಆರು ತಿಂಗಳು, ಸೋಲ್ಜರ್ ಜನರಲ್ ಹುದ್ದೆಗೆ ಗರಿಷ್ಠ 21 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 23 ವರ್ಷ ವಯೋಮಿತಿ ನಿಗದಿಯಾಗಿದೆ. ದಿನಾಂಕ: ಮೇ 7 ರಿಂದ 12ರ ವರೆಗೆ ಕೋಲಾರದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ನಡೆಯಲಿದೆ.

ದೈಹಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎತ್ತರ 162-166 ಸೆಂ. ಮೀಟರ್ ಇರಬೇಕು. ಎದೆಯ ಸುತ್ತಳತೆ 77 ಸೆಂ. ಮೀಟರ್ ಇರಬೇಕು. ಎದೆಯುಬ್ಬಿಸಿದಾಗ 5 ಸೆಂ. ಮೀ ಹೆಚ್ಚಾಗಬೇಕು.

ಆಯ್ಕೆ ಪ್ರಕ್ರಿಯೆ: 1.6 ಕಿ.ಮೀ ಓಟವನ್ನು 5 ನಿಮಿಷ 30 ಸೆಕೆಂಡ್‍ಗಳಲ್ಲಿ ಪೂರೈಸಬೇಕು. ಟೆಕ್ನಿಕಲ್ ಹುದ್ದೆಗಳಿಗೆ 5 ನಿಮಿಷ 45 ಸೆಕೆಂಡ್‍ಗಳು. ಇದಲ್ಲದೇ, ಪುಲ್‍ ಅಪ್ಸ್ ಹಾಗೂ ಉದ್ದ ಜಿಗಿತದಲ್ಲಿ ಅರ್ಹತೆ ಪಡೆಯಬೇಕು. ಇದಾದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ಇರುತ್ತದೆ.

ರ‍್ಯಾಲಿ ವೇಳೆ  ಪ್ರವೇಶ ಪತ್ರ, 20 ಫೋಟೋಗಳು (3 ತಿಂಗಳಿಗಿಂತ ಹಳೆಯದಾಗಿರಬಾರದು), ಶೈಕ್ಷಣಿಕ ದಾಖಲೆಗಳ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ ( ತಹಸೀಲ್ದಾರ್ ಕಚೇರಿಯಿಂದ ಪಡೆದ), ಜಾತಿ ಪ್ರಮಾಣ ಪತ್ರ, ಕೊನೆಯ ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಿಂದ ನಡವಳಿಕೆ ಪ್ರಮಾಣ ಪತ್ರ, ಎನ್‍ಸಿಸಿ ಹಾಗೂ ಕ್ರೀಡಾಪಟುಗಳು ಎರಡು ವರ್ಷಕ್ಕಿಂತ ಹಳೆಯದ್ದಲ್ಲದ ಸಾಧನೆಯ ಪ್ರಮಾಣ ಪತ್ರ, ಅವಿವಾಹಿತ ಪ್ರಮಾಣಪತ್ರ, ಸಂಬಂಧದ ಪ್ರಮಾಣ ಪತ್ರಗಳನ್ನು ತರಬೇಕು. ನೋಂದಣಿಗೆ ಕೊನೇ ದಿನ: 26.4.2021. ಮಾಹಿತಿಗೆ:http://www.joinindianarmy.nic.in ವೆಬ್ ಸೈಟ್ ಗೆ ಭೇಟಿ ನೀಡಿ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top