ದಾವಣಗೆರೆ: ಅನೈತಿಕ ಸಂಬಂಧಕ್ಕೆ ಕಟ್ಟುಬಿದ್ದಿದ್ದ ಮೊಮ್ಮಗಳಿಗೆ ತಾತ ಅಡ್ಡಿಯಾಗಿದ್ದ. ಈ ತಾತನನ್ನೇ ಮುಗಿಸಿದ್ರೆ ನಮಗೆ ಯಾರ ಕಿರಿಕ್ ಇರಲ್ಲ ಎಂದು ತಾಯಿ ಮತ್ತು ಪ್ರಿಯಕರನ ಜೊತೆ ಸೇರಿ ತಾತನನ್ನೇ ಕೊಲೆ ಮಾಡಿದ್ದಾಳೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕ್ ಕುಳಗಟ್ಟೆ ಗ್ರಾಮದಲ್ಲಿ ಒಂದೇ ಮನೆ ಯಲ್ಲಿ ತಂದೆ , ಮಗಳು ಹಾಗೂ ಮೊಮ್ಮಗಳು ವಾಸವಾಗಿದ್ದರು. ಮೊಮ್ಮಗಳು ನರ್ಸಿಂಗ್ ಓದುತ್ತಿದ್ದಳು. ಮನೆಯ ಯಜಮಾನನಾದ 68 ವರ್ಷದ ಮಂಜಪ್ಪ ತನ್ನ ಕೆಲಸವನ್ನು ತಾನು ಮಾಡಿಕೊಂಡು ಅರಾಮಗಿದ್ದನು.ಆದ್ರೆ ಮಂಜಪ್ಪನ ಮಗಳು ಉಷಾ ಹಾಗು ಉಷಾಳ ಮಗಳು ಸಿಂಧು ಕೆಟ್ಟ ಚಟಕ್ಕೆ ವೃದ್ಧ ಬಲಿಯಾಗಿದ್ದಾನೆ. ಅದೇ ಗ್ರಾಮದ ಶ್ರೀನಿವಾಸ ಎಂಬ ವ್ಯಕ್ತಿಯ ಜೊತೆ ಸೇರಿಕೊಂಡು ಮಂಜಪ್ಪನನ್ನು ಅಮಾನುಷವಾಗಿ ಕೊಲೆ ಮಾಡಿ ಅಡಿಕೆತೋಟದ ಭದ್ರಾ ನಾಲೆಯಲ್ಲಿ ಹಾಕಿದ್ದಾರೆ.
ಸಿಂಧು ಅನೈತಿಕ ಸಂಬಂಧಕ್ಕೆ ಕಟ್ಟುಬಿದ್ದಿದ್ದಳು. ಇದಕ್ಕೆ ತಾಯಿ ಬೆಂಬಲ ಕೂಡ ಇತ್ತು. ಮದುವೆಯಾಗಿ ಒಂದು ಮಗುವಿರುವ ಶ್ರೀನಿವಾಸ ನ ಜೊತೆ ಉಷಾ ಹಾಗು ಸಿಂಧು ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಈ ಅನೈತಿಕ ಸಂಬಂಧದ ವೃದ್ಧ ಮಂಜಪ್ಪನ ಇಲ್ಲಸಲ್ಲದ ಮಾತುಗಳಿಂದ ಬೇಸತ್ತಿದ್ದರು. ಈ ಅಜ್ಜನ ಕಾಟ ಸಹಿಸಿಕೊಳ್ಳುವುದಕ್ಕಿಂತ ಕೊಲೆ ಮಾಡುವ ನಿರ್ಧಾರಕ್ಕೆ ಬಂಧಿದ್ದರು. ಉಪಾಯದಿಂದ ತೋಟಕ್ಕೆ ಕರೆದುಕೊಂಡು ಹೋಗಿ ಕುಡಿಸಿ ಮತ್ತಿನಲ್ಲಿ ಶ್ರೀನಿವಾಸ ಅಜ್ಜನ ತಲೆ ಹೊಡೆದು ಚಾನಲ್ ನೀರಿಗೆ ಹಾಕಿ ಬಂದಿದ್ದ.
ಶ್ರೀನಿವಾಸ ಅನೈತಿಕ ಸಂಬಂಧಕ್ಕೆ ಕಟ್ಟುಬಿದ್ದು ವಯೋವೃದ್ಧ ಮಂಜಪ್ಪನ ತಲೆ ಹೊಡಿದಿದ್ದ.ಇದಕ್ಕೆ ಉಷಾ ಹಾಗು ಸಿಂಧು ಇಬ್ಬರು ಮಾಸ್ಟರ್ ಪ್ಲಾನ್ ಮಾಡಿ ಶ್ರೀನಿವಾಸನಿಗೆ ಸುಫಾರಿ ಕೊಟ್ಟಿದ್ದರು. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣವನ್ನು ಹೊನ್ನಾಳಿ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಬೇಧಿಸಿದ್ದಾರೆ.ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಶಕ್ಕೆ ಪಡೆದ್ದಾರೆ.