ದಾವಣಗೆರೆ: ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ವಿನೋಬ ನಗರದದಲ್ಲಿ ನಡೆದಿದೆ. ದಾವಣಗೆರೆ: 4,912 ಅಕ್ರಮ ಬಿಪಿಎಲ್ ಕಾರ್ಡ್ ರದ್ದು; RTO ಇಲಾಖೆಯಿಂದ ಕಾರು ಖರೀದಿದಾರರ ಮಾಹಿತಿ ಸಂಗ್ರಹ..!
ವಿನೋಬನಗರ 4ನೇ ಮೇನ್, 3ನೇ ಕ್ರಾಸ್ ಬಳಿ ಮಹಿಳೆಯೊಬ್ಬರಿಂದ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಶರಣಮ್ಮ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ. ವೇಳೆ ಪಲ್ಸರ್ ಬೈಕ್ನಲ್ಲಿ ಬಂದ ಕಿಡಿಗೇಡಿಗಳು ಚಿನ್ನದ ಸರ ಕಸಿದುಕೊಂಡು ಹೋಗಿದ್ದಾರೆ.
ಬೈಕ್‌ನ ಲೈಟ್ ಮುಖಕ್ಕೆ ಬಿಟ್ಟಿದ್ಧಾರೆ. ಶರಣಮ್ಮ ಅವರು ಲೈಟ್ ಬಿಟ್ಟ ತಕ್ಷಣ ಗೊಂದಲಕ್ಕೆ ಒಳಗಾಗಿದ್ದಾರೆ. ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು, ಮಾಂಗಲ್ಯ ಸರ ಕಿತ್ತು ಎಸ್ಕೆಪ್ ಆಗಿದ್ದಾರೆ. ಚಿನ್ನದ ಮಾಂಗಲ್ಯ ಸರದ ಒಟ್ಟು ಮೌಲ್ಯ 1. 50 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



