ಬೆಂಗಳೂರು: ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್ ಮತ್ತು 2 ಸಾರ್ವಜನಿಕ ವಲಯದ ಬ್ಯಾಂಕ್‍ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಮಾರ್ಚ್ 15 ಮತ್ತು 16ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.
ಮುಷ್ಕರದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಅಂಗ ಸಂಘಟನೆಗಳಾದ ಎಐಬಿಇಎ, ಎಐಬಿಓಸಿ, ಎನ್‍ಸಿಬಿಇ, ಎಐಬಿಓಎ ಸೇರಿದಂತೆ ಗ್ರಾಮೀಣ ಬ್ಯಾಂಕ್ ಸಂಘಟನೆಗಳಿಗೆ ಸೇರಿದ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಹಾಗೂ ಅಕಾರಿಗಳು ದೇಶದಾದ್ಯಂತ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.
ಮುಷ್ಕರದ ಅಂಗವಾಗಿ ದಾವಣಗೆರೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಮತಪ್ರದರ್ಶನದ ಮೂಲಕ ಪ್ರತಿಭಟನೆ, ನಂತರ ಕೆನರಾ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಯಲಿದೆ. ಮುಷ್ಕರ ಸಂಬಂಧ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಎಲ್ಲಾ ಸದಸ್ಯರು, ಗ್ರಾಮೀಣ ಬ್ಯಾಂಕ್ ಉದ್ಯೋಗಿ ಸಂಘಟನೆಗಳ ಸದಸ್ಯರು, ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಸದಸ್ಯರು, ಪಿಗ್ಮಿ ಸಂಗ್ರಹಕಾರರು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಭಾಗವಹಿಸಿ, ಸರ್ಕಾರದ ಬ್ಯಾಂಕ್ ಖಾಸಗೀಕರಣ ನಡೆಯನ್ನು ಹಿಮ್ಮೆಟ್ಟಿಸಬೇಕಾಗಿ ಜಿಲ್ಲಾ ಸಂಚಾಲಕರಾದ ಕೆ.ಎನ್.ಗಿರಿರಾಜ್‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ.