ಬೆಂಗಳೂರು: ರಾಜ್ಯದಲ್ಲಿ ಎಲ್ಲ ಗ್ರಾಮಗಳಿಗೂ ಆದ್ಯತೆ ಮೇರೆಗೆ ಸ್ಮಶಾನ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ. ತಳವಾರ್ ಸಾಬಣ್ಣ ಅವರ ಪ್ರಶ್ನೆ ಕೇಳಿ, ಕಲಬುರಗಿ ಶಹಬಾದ್ ತಾಲ್ಲೂಕಿನ ಭಂಕೂರು ಗ್ರಾಮದಲ್ಲಿ ಸ್ಮಶಾನದ ಕೊರತೆ ಇರುವುದನ್ನು ವಿವರಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಈ ಗ್ರಾಮದಲ್ಲಿ 23 ಎಕರೆ ಸರ್ಕಾರಿ ಜಾಗ ಇದೆ. ಆದರೆ ಅದನ್ನು ಸ್ಮಶಾನಕ್ಕೆ ನೀಡಲು ಸ್ಥಳೀಯರು ಅವಕಾಶ ನೀಡುತ್ತಿಲ್ಲ. ಹೀಗಾಗಿ ಬೇರೆಡೆ 4.3 ಎಕರೆ ಜಮೀನು ಖರೀದಿಗೆ ಕ್ರಮ ಕೈಗೊಂಡಿದ್ದೇವೆ ಎಂದರು .
ರಾಜ್ಯದಲ್ಲಿ 29,590 ಗ್ರಾಮಗಳಿವೆ. ಅವುಗಳಲ್ಲಿ 21,330 ಗ್ರಾಮಗಳಿಗೆ ಸ್ಮಶಾನಕ್ಕೆ ಜಮೀನಿದೆ. ಇನ್ನು 7,069 ಗ್ರಾಮಗಳಿಗೆ ಸ್ಮಶಾನ ಇಲ್ಲ. ಅಷ್ಟೂ ಗ್ರಾಮಗಳಿಗೆ ಅಗತ್ಯವಿದ್ದರೆ ಭೂಮಿ ಖರೀದಿ ಮಾಡಿ ಸ್ಮಶಾನಕ್ಕೆ ಜಾಗ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.



