ಬೆಂಗಳೂರು: ಸಿಡಿ ಪ್ರಕರಣದಲ್ಲಿ ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ಸಿಡಿ ನೂರಕ್ಕೆ ನೂರರಷ್ಟು ನಕಲಿಯಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ವಿರುದ್ಧ ಕುತಂತ್ರ ಮಾಡಿ ಸಿಡಿ ಮಾಡಿದ್ದಾರೆ. ನಾಲ್ಕು ತಿಂಗಳುಗಳಿಂದ ಇದನ್ನೆಲ್ಲಾ ಮಾಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಕುಟುಂಬದ ಮರ್ಯಾದೆ ವಾಪಸ್ ಬರಬೇಕು. ಕುಟುಂಬದ ಮರ್ಯಾದೆ ನನಗೆ ಮುಖ್ಯವಾಗಿದೆ. ರಾಜಕಾರಣಕ್ಕಿಂತ ನನಗೆ ಕುಟುಂಬದ ಮರ್ಯಾದೆ ಮುಖ್ಯ ಎಂದು ಕಣ್ಣೀರು ಹಾಕಿದರು. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅನೇಕರು ಧೈರ್ಯ ತುಂಬಿದ್ದಾರೆ ಎಂದರು.
ನಾನುಬಹಳ ದುಃಖದಲ್ಲಿ ಇದ್ದೇನೆ. ನಾಲ್ಕೈದು ದಿನದಿಂದ ಎಲ್ಲಾ ಬೆಳವಣಿಗೆ ನೋಡುತ್ತಿದ್ದೇನೆ. ರಾಜೀನಾಮೆ ನೀಡಿರುವುದು ನನ್ನ ವಯಕ್ತಿಕ ನಿರ್ಧಾರವಾಗಿದೆ.ನಾನು ರಾಜೀನಾಮೆ ಕೊಟ್ಟು ನೇರವಾಗಿ ಊರಿಗೆ ಹೋಗಿದ್ದೆ. ನಂತರದ ಬೆಳವಣಿಗೆ ನನಗೆ ಗೊತ್ತಿಲ್ಲ. ಬೆಂಗಳೂರಿನ ಎರಡು ಕಡೆ ಷಡ್ಯಂತ್ರ ನಡೆದಿದೆ. ಒಬ್ಬ ಮಹಾನ್ ನಾಯಕನಿಂದ ಇದೆಲ್ಲ ಆಗಿದೆ. ಅವರ ಬಗ್ಗೆ ಈಗ ಹೇಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ನನ್ನನ್ನು ರಾಜಕೀಯವಾಗಿ ಮುಗಿಸಲು ದೊಡ್ಡ ಷಡ್ಯಂತ್ರ ನಡೆಸಿದ್ದಾರೆ, ಈ ಸಿಡಿ ೧೦೦% ನಕಲಿ, ಈ ವಿಡಿಯೋ ಮಾಡಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಈ ಸಿಡಿ ಬಿಡುಗಡೆಯಿಂದ ನನ್ನ ಕುಟುಂಬದ ಮಾರ್ಯಾದೆ ಹೋಗಿದೆ, ನನಗೆ ರಾಜಕಾರಣ ಬೇಕಿಲ್ಲ, ನನಗೆ ಕುಟುಂಬ ಮುಖ್ಯ, ಎಷ್ಟೇ ಖರ್ಚಾದರೂ ಪರವಾಗಿಲ್ಲ ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರನ್ನು ಜೈಲಿಗೆ ಹಾಕಿಸದೇ ಬಿಡುವುದಿಲ್ಲ ಎಂದರು.
ಈ ಸಿಡಿಯಲ್ಲಿ ಯಾವುದು ಸತ್ಯಾಂಶ ಇಲ್ಲ./ನನ್ನ ಸಹೋದರ ಹೇಳಿದಂತೆ ಈ ಪ್ರಕರಣದಲ್ಲಿ 2+3+4 ಮಂದಿ ಇದ್ದಾರೆ. ಬೆಂಗಳೂರಿನ ಎರಡು ಕಡೆ ಷಡ್ಯಂತ್ರ ನಡೆದಿದೆ ಒಂದು ಒರಾಯನ್ ಮಾಲ್ 5ನೇ ಪ್ಲೋರ್, ಇನ್ನೊಂದು ಯಶವಂತ್‌ಪುರ 4ನೇ ಪ್ಲೋರ್‌ನಲ್ಲಿ ನಡೆದಿದೆ. 50 ಲಕ್ಷವಲ್ಲ 5 ಕೋಟಿ ದುಡ್ಡು ಕೊಟ್ಟಿದ್ದಾರೆ, ಆ ಹುಡುಗಿಗೆ 2ಪ್ಲಾಟ್ ಕೊಟ್ಟಿದ್ದಾರೆ ಎಂದು ಮಾಹಿತಿ ನನಗೆ ಇದೆ. ನನ್ನ ಮೇಲಿರುವ ಆರೋಪವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ.



