ದಾವಣಗೆರೆ: ಸ್ಯಾಂಡಲ್ ವುಡ್ ಖ್ಯಾತ ನಟ ದರ್ಶನ್, ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಸಿನಿಮಾ ಫ್ರೀ ರಿಲೀಸ್ ಕಾರ್ಯಕ್ರಮದ ವೇಳೆ ಜೈಲಿನಲ್ಲಿರು ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಇದೀಗ ದಾವಣಗೆರೆಯ ಪ್ರಭಾವಿ ಮುಖಂಡ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ಕುದುರೆ ತೆಗೆದುಕೊಂಡು ಹೋಗುವಾಗ ಕುದುರೆ ತಡಿ ನೀಡುವುದಾಗಿ ದರ್ಶನ್ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ದರ್ಶನ್ , ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಅಮೆರಿಕದಿಂದ ತಂದಿದ್ದ ತಡಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾದ ಪ್ರೀ ರಿಲೀಸಿಂಗ್ ಇವೆಂಟ್ ಮುಗಿಸಿದ ನಟ ದರ್ಶನ್ ದಾವಣಗೆರೆಗೆ ಬಂದು ಮಲ್ಲಿಕಾರ್ಜುನ ಅವರನ್ನು ಭೇಟಿಯಾದರು. ಅತಿಥಿ ಗೃಹಕ್ಕೆ ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.
ಮೊದಲಿನಿಂದಲೂ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅಮೆರಿಕದಿಂದ ತಂದ್ದಿದ ಕುದುರೆಯ ತಡಿ ಯನ್ನು ಉಡುಗೊರೆಯಾಗಿ ನೀಡಿದರು



