ಬೆಂಗಳೂರು: ನನಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಈ ಬಗ್ಗೆ ಸ್ಪಷ್ಟೀಕರಣ ಕೊಡುವ ಅಗತ್ಯವಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷ ನಿರ್ವಹಿಸಿದ ಕೆಲಸವನ್ನು ಮಾಡಿದ್ದೇನೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ವರದಿ ಕೇಳಿದ್ದರು. ಅದನ್ನು ನೀಡಲು ಬಂದಿದ್ದೆ. ಆದರೆ, ಅವರು ಕಚೇರಿಯಲ್ಲಿ ಇಲ್ಲ. ಹೀಗಾಗಿ ಮತ್ತೆ ಕೆಪಿಸಿಸಿ ಅಧ್ಯಕ್ಷರು ಕರೆ ಮಾಡಿದರೆ, ಬರುತ್ತೇನೆ ಎಂದು ಬೆಂಗಳೂರಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದಲೂ ವರದಿ ಸಲ್ಲಿಕೆಯಾಗಲಿದೆ. ಮೈತ್ರಿ ವಿಚಾರದಲ್ಲಿ ಪಕ್ಷಕ್ಕೆ ದಕ್ಕೆ ಯಾಗಿದ್ದರೆ ಸೂಕ್ತ ತನಿಖೆ, ವಿಚಾರಣೆ ಮಾಡಿಸಿ , ಸತ್ಯ ಸಂಗತಿ ಹೊರ ತರಲಿ. ನಾನೇ ಗುರಿಯಾಗಿದ್ದೇನೋ ಅಥವಾ ನನ್ನನೇ ಗುರಿ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ನಾನು ಮಾಡಿವ ಕೆಲಸದಲ್ಲಿ ತಪ್ಪಿಲ್ಲ ಎಂದರು.



