ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಸರ್ಕಾರ ವಿರುದ್ಧದ ಹೋರಾಟಕ್ಕೆ ಮತ್ತೆ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮುಂದಾಗಿದೆ. ಮಾರ್ಚ್ 2ರಂದು ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ.
ಧರಣಿಯ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದು, ‘ಈ ಹಿಂದೆ ನಡೆಸಿದ ಧರಣಿ ವೇಳೆ ಸರ್ಕಾರ ಕೊಟ್ಟ ಭರವಸೆ ವಿಳಂಬವಾದ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಸೇರಿ 9 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುವುದು ಎಂದು ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಧರಣಿ ಸತ್ಯಾಗ್ರಹಕ್ಕೆ ವಾರದ ರಜೆ, ಡ್ಯೂಟಿಗೆ ಹಾಜರಾಗುವವರು, ರಾತ್ರಿ ಡ್ಯೂಟಿ ನಡೆಸುವವರು, ತಪ್ಪದೇ ಹಾಜರಾಗಬೇಕು ಎಂದು ತಿಳಿಸಿದೆ.



