ಶಿವಮೊಗ್ಗ: ಚಿತ್ರದುರ್ಗ,ದಾವಣಗೆರೆ, ಶಿವಮೊಗ್ಗ ಜಿಲ್ಲೆ ಹಾಲು ಉತ್ಪಾದಕರಿಗೆ ಶಿಮುಲ್ ಸಿಹಿ ಸುದ್ದಿ ನೀಡಿದ್ದು, ಪ್ರತಿ ಲೀಟರ್ ಗೆ 2.25 ರೂಪಾಯಿ ಹೆಚ್ಚಿಸಿದೆ. ಇದು 90 ಸಾವಿರ ರೈತರಿಗೆ ಅನುಕೂಲವಾಗಲಿದೆ.
ಹಾಲು ಉತ್ಪಾದಕರಿಗೆ ಸಂಕ್ರಾಂತಿ ಕೊಡುಗೆಯಾಗಿ 2.75 ರೂ. ಹೆಚ್ಚಳ ಮಾಡಿದ್ದ ಶಿಮುಲ್, ಇದೀಗ ಮತ್ತೆ 2.25 ರೂ. ಹೆಚ್ಚಿಸಿದೆ. ಇದು ಮಾರ್ಚ್, 1 ರಿಂದ ಮಾರ್ಚ್ 31 ವರೆಗೆ ಜಾರಿ ಇರಲಿದೆ. ಈ ಮೂಲಕ ರೈತರಿಗೆ ಪ್ರತಿ ಲೀಟರ್ ಗೆ ಸರ್ಕಾರದ ಸಹಾಯ ಧನ 5 ರೂಪಾಯಿ ಸೇರಿ 32.50 ಸಿಗಲಿದೆ.
ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದ ಶಿಮುಲ್, ಇದೀಗ ಚೇತರಿಕೆ ಕಂಡಿದೆ. ಹಾಲಿಗೆ ಬೇಡಿಕೆ ಕೂಡ ಬಂದಿದೆ. ನಿತ್ಯ ಹಾಲಿನ ಸಂಗ್ರಹವೂ ಕೂಡ ಹೆಚ್ಚಿದೆ. ಶಿಮುಲ್ ನ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗದ 90 ಸಾವಿರ ರೈತರಿಗೆ ಅನುಕೂಲವಾಲಿದೆ.



