ಬೆಂಗಳೂರು: 79ನೇ ವಸಂತಕ್ಕೆ ಕಾಲಿಟ್ಟ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಗಣ್ಯರು ಶುಭಾಶಯ ಕೋರಿದ್ದಾರೆ. ಬಿಎಸ್ವೈ ಹೆಸರಿನಲ್ಲಿರ ಅಭಿಮಾನಿಗಳು ಪೂಜೆ, ಹೋಮ ಮಾಡಿಸಿ ನೆಚ್ಚಿನ ನಾಯಕ ಆಯಸ್ಸು ವೃದ್ಧಿಸಲೆಂದು ಪ್ರಾರ್ಥಿಸುತ್ತಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಗಣ್ಯರು ಬಿಎಸ್ವೈಗೆ ಶುಭ ಕೋರಿದ್ದಾರೆ.
ಯಡಿಯೂರಪ್ಪ ಅವರು ಅನುಭವಿ ಆಡಳಿತಗಾರ. ಬಡವರ, ರೈತರ ಪಾಲಿನ ಆಶಾಕಿರಣ ಬಿಎಸ್ವೈ. ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಕರುಣಿಸಿ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶುಭಕೋರಿದ್ದಾರೆ.
ಕುಟುಂಬಸ್ಥರು ಸಿಎಂಗೆ ಆರತಿ ಬೆಳಗಿ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದರು. ಕಾವೇರಿ ನಿವಾಸಕ್ಕೆ ಬೆಳಗ್ಗೆಯೇ ಆಗಮಿಸಿದ ನಳೀನ್ ಕುಮಾರ್ ಕಟೀಲ್, ಆರ್.ಅಶೋಕ್, ಉಮೇಶ್ ಕತ್ತಿ, ಪಿ.ಸಿ. ಮೋಹನ್, ನಟ ಜಗ್ಗೇಶ್, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಈರಣ್ಣ ಕಡಾಡಿ, ರಾಜ್ಯ ಬಿಜೆಪಿ ರೈತ ಮೋರ್ಚಾ ನಿಯೋಗ ಹಾಗೂ ಶಾಸಕರು ತಮ್ಮ ನಾಯಕನಿಗೆ ಜನ್ಮದಿನ ಶುಭಾಶಯ ತಿಳಿಸಿದರು.