ಸಿರಿಗೆರೆ: ಇಂದು (ಫೆ.27) ಐತಿಹಾಸಿಕ ತರಳಬಾಳು ಹುಣ್ಣಿಮೆ ಮಹೋತ್ಸವ ಸರಳವಾಗಿ ನಡೆಯಲಿದೆ. ಕೊರೊನಾ ಕಾರಣದಿಂದ ಕೊಟ್ಟೂರಲ್ಲಿ ಆಚರಿಸಿದ್ದಬೇಕಿದ್ದ ಹುಣ್ಣಿಮೆ ಮಹೋತ್ಸವ ರದ್ದುಗೊಳಿಸಲಾಗಿತ್ತು. ಹೀಗಾಗಿ ಇಂದು ಸಂಪ್ರದಾಯದಂತೆ ಸರಳವಾಗಿ ಸಿರಿಗೆರೆಯ ತರಳಬಾಳು ಬೃಹನ್ಮಠದ ಗುರುಶಾಂತೇಶ್ವರ ಭವನದಲ್ಲಿ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸದ್ಧರ್ಮ ಸಿಂಹಾಸನಾರೋಹಣ ಮಾಡಲಿದ್ದಾರೆ. ನಂತರ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮ ಸಂಜೆ 7.30ಕ್ಕೆ ನಡೆಯಲಿದ್ದು, ಯುಟ್ಯೂಬ್ ನಲ್ಲಿ Taralabalu Math Sirigere ಚಾಲನ್ ನಲ್ಲಿ ಲೈವ್ ಸ್ಟ್ರಿಮಿಂಗ್ ವೀಕ್ಷಿಸಬಹುದಾಗಿದೆ ಅಥವಾ ಈ ಲಿಂಕ್ https://www.youtube.com/channel/UCuUAJc9ydIUh7RfObIl_4mg ಕ್ಲಿಕ್ ಮಾಡುವ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಕಳೆದ ವರ್ಷ ಹಳೇಬೀಡಿನಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಬಾರಿ ಕೊಟ್ಟೂರಲ್ಲಿ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ಎರಡನೇ ಅಲೆ ಹಿನ್ನೆಲೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.



