ದಾವಣಗೆರೆ: ಪ್ರತಿ ಜಿಲ್ಲೆಯಲ್ಲಿ 15 ದಿನಗಳಿಗೊಮ್ಮೆ ಸ್ಫೋಟಕ ಪ್ರದೇಶ ಮೇಲೆ ಭೂ ಮತ್ತು ಗಣಿ ಇಲಾಖೆ ಹಾಗೂ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದರು. ಎಲ್ ಪಿಜಿ ಸಿಲಿಂಡರ್ ಗ್ರಾಹಕರಿಗೆ ಮತ್ತೊಂದು ಶಾಕ್; ಮತ್ತೆ 25 ದರ ಹೆಚ್ಚಿಸಿದ ಸರ್ಕಾರ; ಒಂದೇ ತಿಂಗಳಲ್ಲಿ ಮೂರು ಬಾರಿ ಏರಿಕೆ..!
ಶಾಮನೂರು ಶಿವಶಂಕರಪ್ಪ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ15 ದಿನಗಳಿಗೊಮ್ಮೆ ಸ್ಫೋಟಕ ಬಳಸುವ ಪ್ರದೇಶದ ಮೇಲೆ ಭೂ ಮತ್ತು ಗಣಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದರು.
ಈಗಾಗಲೇ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿದ ಸ್ಪೋಟಕದ ಬಳಿಕ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಯಾರಿಗೆ ಸ್ಪೋಟಕ ಬಳಸುವ ಪರವಾನಿಗೆ ಇದ್ದವರೇ ನಿಯಮ ಬಾಹಿರವಾಗಿ ಸ್ಪೋಟಕ ಬಳಸುತ್ತಿದ್ದಾರೆ. ಇದರ ಮೇಲೆ ನಿಗಾ ಇಡಲಾಗುವುದು. ಸ್ಪೋಟಕ ದ ಬಗ್ಗೆ ಕೇಂದ್ರ ಸರ್ಕಾರದ ಕಾಯ್ದೆ ಕೂಡಾ ಪಾಲನೆಗೆ ಸೂಕ್ತ ಸೂಚನೆ ನೀಡಲಾಗಿದೆ. ಯಾರೇ ನಿಯಮ ಬಾಹಿರವಾಗಿ ಸ್ಪೋಟಕ ಬಳಸಿದರೇ ಸೂಕ್ತ ಕ್ರಮಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.



