ದಾವಣಗೆರೆ: ಮೀಸಲಾತಿ ವಿಚಾರದಲ್ಲಿ ಸಿಎಂ ಕಾನೂನು ತಜ್ಞರ ಜೊತೆ ಮಾತುಕತೆ ನೀಡಿಸಿದ್ದಾರೆ. ಈಗ ಮನವಿ ಸಲ್ಲಿಸಿದ ಎಲ್ಲ ಜಾತಿಯವರಿಗೆ ಸೂಕ್ತ ನ್ಯಾಯ ಒದಗಿಸುವ ಬಗ್ಗೆ ಸಿಎಂ ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಎಲ್ ಪಿಜಿ ಸಿಲಿಂಡರ್ ಗ್ರಾಹಕರಿಗೆ ಮತ್ತೊಂದು ಶಾಕ್; ಮತ್ತೆ 25 ದರ ಹೆಚ್ಚಿಸಿದ ಸರ್ಕಾರ; ಒಂದೇ ತಿಂಗಳಲ್ಲಿ ಮೂರು ಬಾರಿ ಏರಿಕೆ..!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಾಲ್ಮೀಕಿ, ಪಂಚಮಸಾಲಿ, ಕರುಬ ಸೇರಿದಂತೆ ಕೆಲ ಸಮುದಾಯಗಳು ಮನವಿ ಸಲ್ಲಿಸಿದ್ದಾರೆ. ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ. 50ಕ್ಕೆ ಮೀರಿದೆ. ಈ ವೇಳೆ ಇದನ್ನ ಕೇಂದ್ರ ಸರ್ಕಾರ ಶಡ್ಯೂಲ್ 19 ರಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ಹೆಚ್ಚಳ ಅವಕಾಶ ನೀಡಿದೆ.
ಈ ಬಗ್ಗೆ ಕೆಲ ಸುಪ್ರೀಂ ಕೋರ್ಟ್ ತೀರ್ಪುಗಳು ಸಹ ಬಂದಿವೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರದಲ್ಲಿ ಎಸ್ಸಿ ಮತ್ತು ಎಸ್ಟಿ ಪ್ರತ್ಯೇಕ ಆಯೋಗಗಳಿವೆ. ಜೊತೆಗೆ ಹಿಂದುಳಿದ ವರ್ಗಗಳ ಆಯೋಗವು ಇದೆ. ಇವುಗಳಿಗೆ ಮನವಿ ಸಲ್ಲಿಸಿ ಸೂಕ್ತ ಸಲಹೆ ಪಡೆಯಲಾಗುವುದು. ಈಗ ಮನವಿ ಸಲ್ಲಿಸಿದ ಎಲ್ಲ ಜಾತಿಯವರಿಗೆ ಸೂಕ್ತ ನ್ಯಾಯ ಒದಗಿಸುವ ಬಗ್ಗೆ ಸಿಎಂ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.



