ಬೆಂಗಳೂರು: ಜಿಎಸ್ ಟಿ, ಇಂಧನ ದರ ಏರಿಕೆ, ಇ-ವೇ ಬಿಲ್ ವಿರೋಧಿಸಿ ವರ್ತಕರ ಸಂಘಟನೆ ಕರೆ ನೀಡಿರುವ ಭಾರತ್ ಬಂದ್ ಕರೆ ನೀಡಿವೆ. ರಾಜ್ಯದಲ್ಲಿ ಬಂದ್ ಬೆಂಬಲಿಸಿ ನಾಳೆ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಆಗಲಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಎಲ್ ಪಿಜಿ ಸಿಲಿಂಡರ್ ಗ್ರಾಹಕರಿಗೆ ಮತ್ತೊಂದು ಶಾಕ್; ಮತ್ತೆ 25 ದರ ಹೆಚ್ಚಿಸಿದ ಸರ್ಕಾರ; ಒಂದೇ ತಿಂಗಳಲ್ಲಿ ಮೂರು ಬಾರಿ ಏರಿಕೆ..!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿಸಿ ವರ್ತಕರ ಸಂಘಟನೆ ಕರೆ ನೀಡಿದೆ. ಫೆಬ್ರವರಿ 26ರಂದು ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್ ಆಗಲಿವೆ. ರಾಜ್ಯದಲ್ಲೂ ಲಾರಿ ಸಂಚಾರ ಬಂದ್ ಆಗಲಿವೆ. ನಾಳೆ ಬೆಳಗ್ಗೆಯಿಂದ ಸಂಜೆವರೆಗೆ ಲಾರಿ ಸಂಚಾರ ಇರಲ್ಲ. ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದರು. ಮಾ. 07 ರಂದು ನಡೆಯಬೇಕಿದ್ದ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ರದ್ದು



