ದಾವಣಗೆರೆ: ರೈಲ್ವೆ ನಿಲ್ದಾಣದ ಮೊದಲ ಹಂತದ ಶೇ. 80ರಷ್ಟು ಕಾಮಗಾರಿ ಮುಗಿದಿದೆ. ಇನ್ನೊಂದು 25 ದಿನದಲ್ಲಿ ಎಲ್ಲ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಸಂಸದದ ಜಿಎಂ ಸಿದ್ದೇಶ್ವರ ಹೇಳಿದರು.
ರೈಲ್ವೆ ನಿಲ್ದಾಣ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ನಗರದ ರೈಲ್ವೆ ನಿಲ್ದಾಣ ಸುಂದರವಾಗಿ ನಿರ್ಮಾಣವಾಗಿದ್ದು, ದಾವಣಗೆರೆ ನಗರಕ್ಕೆ ಹೊಸ ರೂಪ ನೀಡಲಿದೆ. ನಿಲ್ದಾಣದಲ್ಲಿ 4 ಎಸ್ಕಲೇಟರ್ ವ್ಯವಸ್ಥೆಯನ್ನು ಸಹ ನಿರ್ಮಾಣ ಮಾಡಿದ್ದು, ಹಿರಿಯ ನಾಗರಿಕರಿಗೆ ಅನುಕೂಲ ಆಗಲಿದೆ. ರಾಜ್ಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ಇರುವ ನಾಲ್ಕನೇ ಜಿಲ್ಲೆಯಾಗಿ ದಾವಣಗೆರೆ ಆಗಲಿದೆ ಎಂದರು.
ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಎಸಿ ಕಚೇರಿ ಜಾಗವನ್ನು ರೈಲ್ವೆ ಇಲಾಖೆಗೆ ನೀಡಲಾಗಿದೆ. ಇದರಿಂದ 100 ಕಾರ್ , 300 ಬೈಕ್ ಹಾಗೂ 20 ಆಟೋ ಗಳು ನಿಲ್ಲವಷ್ಟು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.
ಎರಡನೇ ಹಂತದಲ್ಲಿ ನಿಲ್ದಾಣದ ಸೆಕೆಂಡ್ ಫ್ಲೋರ್ ನಲ್ಲಿ ವೈಟಿಂಗ್ ಹಾಲ್ ನಿರ್ಮಿಸಲಾಗುವುದು. ಗಡಿಯಾರ ಕಂಬದ ರಸ್ತೆಯ ರಲ್ವೆ ಗೇಟ್ ಗೆ ಕೆಲವೊಂದು ಅಂಗಡಿ ಅಡಚಣೆಯಾಗಿವೆ. ಈ ಅಂಗಡಿಗಳನ್ನು ತೆರವು ಮಾಡಿಸಿಕೊಡುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಅಂಗಡಿ ತೆರವಿಗೆ ಈಗಾಗಲೇ ಪಾಲಿಕೆಗೆ ಸೂಚನೆ ನೀಡಲಾಗಿದೆ. ಡಿಸಿಎಂ ಲೇಔಟ್ ಬಳಿಯ ಕಾಮಗಾರಿಯನ್ನು ಮಾರ್ಚ್ 20ರರೊಳಗೆ ಮುಗಿಸಲು ಸೂಚನೆ ನೀಡಲಾಗಿದೆ ಎಂದರು.
ಹರಿಹರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಆರ್ ಎಂ ಆದರಷ್ಟು ಬೇಗ ಬೇಡಿಕೆ ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ಒಟ್ಟನಲ್ಲಿ 20 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನೂ ಅಶೋಕ ಥೇಟರ್ ಬಳಿ ಅಂಡರ್ ಪಾಸ್ ನಿರ್ಮಿಸಲು ಈಗಾಲೇ ಯೋಜನೆ ರೂಪಿಸಲಾಗಿದೆ. ಅಲ್ಲಿನ ಖಾಸಗಿ ಸ್ವತ್ತಿನ ಮಾಲೀಕರಿಗೆ ಬೇರೆ ಕಡೆ ಜಾಗದ ವ್ಯವಸ್ಥೆ ಮಾಡಿ, ಜಾಗ ವಶಕ್ಕೆ ಪಡೆದು ಕಾಮಗಾರಿ ಆರಂಭಿಸಲಾಗುವುದು ಎಂದರು.



