ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮತದಾರರ ಪಟ್ಟಿಯಲ್ಲಿ ಸಚಿವ R.ಶಂಕರ್ ಹೆಸರು ಸೇರ್ಪಡೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ವಿಚಾರಣೆ ನಡೆಯಬೇಕಿತ್ತು. ಆದರೆ, ಸಚಿವರು ಸಮಯಾವಕಾಶ ಕೇಳಿದ ಹಿನ್ನೆಲೆ ವಿಚಾರಣೆಯನ್ನು ಫೆ. 19ಕ್ಕೆ ಮುಂದೂಡಿಕೆಯಾಗಿದೆ.
ಫೆ. 24ರಂದು ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರು ದಾವಣಗೆರೆ ಮತ್ತು ರಾಣೆಬೆನ್ನೂರು ಎರಡೂ ಕಡೆ ಸೇರ್ಪಡೆ ಮಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್ ಮೊರೆಹೋಗಿದ್ದಾರೆ. ಇದೀಗ, ಸಚಿವರು ಸಮಯ ಕೇಳಿದ್ದರಿಂದ ವಿಚಾರಣೆ ಮುಂದೂಡಿಕೆಯಾಗಿದೆ.
ಸಚಿವ ಆರ್.ಶಂಕರ್ ಹೆಸರು ರಾಣೆಬೆನ್ನೂರು ನಗರಸಭೆ ಮತದಾರರ ಪಟ್ಟಿಯಲಿದೆ. ಜೊತೆಗೆ ದಾವಣಗೆರೆ ವಿಳಾಸ ನೀಡಿ ನಗರ ಪಾಲಿಕೆ ಮತದಾರರ ಪಟ್ಟಿಯಲ್ಲೂ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಆರ್.ಶಂಕರ್ ಹೆಸರು ಸೇರ್ಪಡೆ ಪ್ರಶ್ನಿಸಿ ಕಾಂಗ್ರೆಸ್ ತಕರಾರು ಅರ್ಜಿ ಸಲ್ಲಿಸಿತ್ತು



