ದಾವಣಗೆರೆ: ಮಧ್ಯ ಕರ್ನಾಟಕ ದಾಣಗೆರೆಯಲ್ಲಿ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಪೊಗರು ಸಿನಿಮಾ ಆಡಿಯೋ ಲಾಚ್ ಸಮಾರಂಭ ಅದ್ಧೂರಿಯಾಗಿ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಆಡಿಯೋ ಲಾಂಚ್ ಮಾಡಿ, ಪೊಗರು ನಾಯಕ ನಟ ಧ್ರುವ ಸರ್ಜಾ ಅವರಿಗೆ ಶುಭಾ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಕನ್ನದ ಉತ್ತಮ ನಟರಾಗಿದ್ದ ಶಕ್ತಿ ಪ್ರಸಾದ್ ಅವರ ಮಗ ಅರ್ಜುನ್ ಸರ್ಜಾ ಸಹ ಅತ್ಯುತ್ತಮ ನಟ. ಕನ್ನಡ, ತೆಲುಗು, ಹಿಂದಿ ಹೀಗೆ ಅನೇಕ ಭಾಷೆಯಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ ಶಕ್ತಿ ಪ್ರಸಾದ್ ಮೊಮ್ಮಗ ಧ್ರುವ ಸರ್ಜಾ ಪ್ರತಿಭಾನ್ವಿತ ನಟ. ಅವರು ಈಗಾಗಲೇ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಅದೇ ರೀತಿ ಪೊಗರು ಸಿನಿಮಾ ಸಹ ಹಿಟ್ ಆಗಲಿದೆ. ಏಕೆಂದರೆ, ಇವರ ಕುಟುಂಬದಲ್ಲಿಯೇ ಕಲಾವಿದರ ರಕ್ತ ಇದೆ ಎಂದರು.

ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿದ್ದವರು ರಾಜ್ ಕುಮಾರ್. ಅವರಂತೆಯೇ ಧ್ರುವ ಸರ್ಜಾ ಕೂಡ ಉತ್ತಮ ನಟ ಆಗಲಿದ್ದಾನೆ. ಪೊಗರು ಸಿನಿಮಾ ಪೊಸ್ಟರ್ ಗಳನ್ನು ನೋಡಿದ್ರೆ ಆಕ್ಷನ್ ಮೂವಿ ಇದ್ದಾಂಗೆ ಕಾಣಿಸುತ್ತದೆ. ಪೊಗರು ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ. ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಜನರ ಪ್ರೀತಿ ವಿಶ್ವಾಸ ಅಗತ್ಯ. ಇಂತಹ ಪ್ರೀತಿ ಧ್ರುವ ಸರ್ಜಾಗೂ ಸಿಗಲಿ ಎಂದು ಆಶಿಸಿದರು.
ಈ ವೇಳೆ ಚಿತ್ರದ ನಾಯಕ ನಟ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್, ಹಿರಿಯ ನಟ ಅರ್ಜುನ್ ಸರ್ಜಾ ಉಪಸ್ಥಿತರಿದ್ದರು.



