ಸಿರಿಗೆರೆ: ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆ( ಈಗಿನ ವಿಜಯನಗರ ಜಿಲ್ಲೆ) ಕೊಟ್ಟೂರು ತಾಲೂಕಿನಲ್ಲಿ ನಡೆಯಬೇಕಿದ್ದ ಈ ಬಾರಿಯ ತರಳಬಾಳು ಹುಣ್ಣಿಮೆ ಮಹೋತ್ಸವ ಮುಂದೂಡಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೊಟ್ಟೂರಲ್ಲಿ ಫೆ.19 ರಿಂದ 27 ವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಒಂಬತ್ತು ದಿನ ನಡೆಯಬೇಕಿದ್ದ ಮಹೋತ್ಸವನ್ನು ಮುಂದೂಡಲಾಗಿದೆ. ತರಳಬಾಳು ಹುಣ್ಣಿಮೆ ರದ್ದಾಗಿದರೂ ಸಿರಿಗೆರೆ ಮಠದಲ್ಲಿ ಸರಳವಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಅದನ್ನು ಕೂಡ ಕೈ ಬಿಡಲಾಗಿದೆ. ಆದರೆ, ಈ ಬಾರಿ ಭಕ್ತಾಧಿಗಳಿಗೆ 9 ದಿನವೂ ಸಾಮಾಜಿಕ ಜಾಲತಾಣದ ಮೂಲಕ ಶ್ರೀಗಳು ಸಂದೇಶ ತಿಳಿಸಲು ವ್ಯವಸ್ಥೆ ಮಾಡಲಾಗಿದೆ.