ದೆಹಲಿ: ಕೇಂದ್ರ ಸರ್ಕಾರ ನೌಕರರು ತುರ್ತು ಸಮಯದಲ್ಲಿ ಸಿಜಿಹೆಚ್‌ಎಸ್ ಅಂದರೆ ಕೇಂದ್ರ ಸರ್ಕಾರ ಸೂಚಿಸಿರುವ ಆಸ್ಪತ್ರೆಗಳ ಹೊರತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ನೌಕರರ ಹಕ್ಕಿನ ಅನ್ವಯ ಸರ್ಕಾರದಿಂದ ಮೆಡಿಕ್ಲೇಮ್ ಪಡೆಯಬುದು ಎಂದ ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರ ನೌಕರರು, ಪೀಂಚಣಿದಾರರು ತುರ್ತು ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ, ಸರ್ಕಾರ ಆರೋಗ್ಯ ವಿಮಾ ಸೌಲಭ್ಯವನ್ನು ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಆರೋಗ್ಯ ವಿಮಾ ಸೌಲಭ್ಯ ನೌಕರನ ಹಕ್ಕು. ಈ ಹಕ್ಕನ್ನು ಸರ್ಕಾರ ತಡೆಯುವಂತಿಲ್ಲ. ನೌಕರ ದಾಖಲೆ ನೀಡಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಕುರಿತು ಪರಿಶೀಲನೆ ನಡೆಸಿ ಚಿಕಿತ್ಸಾ ವೆಚ್ಚವನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇನ್ನು ಈ ತೀರ್ಪಿನಿಂದ ಸರ್ಕಾರಿ ನೌಕರರು ನಿಟ್ಟುಸಿರುಬಿಡುವಂತಾಗಿದೆ. ಈ ಮೊದಲು ಯಾವುದೇ ಖಾಯಿಲೆ ಇರಲಿ ಸರ್ಕಾರದಿಂದ ಚಿಕಿತ್ಸಾವೆಚ್ಚವನ್ನು ಪಡೆಯಬೇಕೆಂದಿದ್ದರೆ ಸಿಜಿಹೆಚ್‌ಎಸ್ ಸೂಚಿಸಿದ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕಿತ್ತು.