ಬೆಂಗಳೂರು: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡು ರಾಜ್ಯ ಸರ್ಕಾರ ಆದೇಶಿಸಿದೆ.
ಇಂದು ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಕೊರೊನಾ ರೋಗ ಇನ್ನೂ ಇರುವ ಹಿನ್ನಲೆಯಲ್ಲಿ, ಸಾಹಿತ್ಯ ಜಾತ್ರೆಗೆ ಹೆಚ್ಚಿನ ಮಂದಿ ಆಗಮಿಸಲಿದ್ದು, ಹೆಚ್ಚು ಹರಡುವುದು. ಈ ಹಿನ್ನಲೆ ಮುಂಜಾಗ್ರತ ಕ್ರಮವಾಗಿ ಹಾವೇರಿಯಲ್ಲಿ ನಡೆಬೇಕಾಗಿದ್ದ ಸಾಹಿತ್ಯ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಿದ್ದು, ಮುಂದಿನ ದಿನಗಳಲ್ಲಿ ಇನ್ನೊಂದು ಸಭೆ ಸೇರಿ ಸಮ್ಮೇಳನ ನಡೆಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿಸಿದ್ದಾರೆ.