ಬೆಂಗಳೂರು: ಕೊರೊನಾ ಸಮುಯದಲ್ಲಿ ಸುಮಾರು 2 ಸಾವಿರ ಬಿಎಂಎಟಿಸಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇಲಾಖೆಗೆ ಮಾಹಿತಿ ನೀಡದೆ ರಜೆಗೆ ಸೂಕ್ತ ಕಾರಣ ತಿಳಿಸದೆ, ಸಂಪರ್ಕದಿಂದ ದೂರ ಉಳಿದಿದ್ದಾರೆ. ಹಾಗಾಗಿ ಬಿಎಂಟಿಸಿ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಇಲಾಖೆ ನಿರ್ಧಾರಕ್ಕೆ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಎಸ್ ಆರ್ ಟಿಸಿ ಕೊವಿಡ್ ವೇಳೆ ರಜೆ ಕೊಡುವ ಪದ್ಧತಿಯನ್ನ ತಂದಿತ್ತು. ರಜೆ ಬಯಸುವ ಸಿಬ್ಬಂದಿ ವೇತನ ರಹಿತ ರಜೆ ಪಡೆಯಬಹುದು ಎಂದು ಕೊರೊನಾ ಸಮಯದಲ್ಲಿ ನಿಯಮವೊಂದನ್ನು ಜಾರಿಗೆ ತಂದಿತ್ತು. ಆದ್ರೆ ಬಿಎಂಟಿಸಿಯಲ್ಲಿ ಈ ರೀತಿಯ ಯಾವುದೇ ನಿಯಮ ಇಲ್ಲ. ಆದರೂ ಕಾರಣ ನೀಡದೆ 2 ಸಾವಿರ ಸಿಬ್ಬಂದಿ ರಜೆ ಹಾಕಿದ್ದಾರೆ.ಇಷ್ಟು ದಿನ ರಜೆಯಲ್ಲಿರುವ ಸಿಬ್ಬಂದಿಗೆ ಬಿಎಂಟಿಸಿ ಕಾದು ನೋಡಿತ್ತು. ಆದ್ರೆ ಅವರ ಸುಳಿವು ಇಲ್ಲದ ಕಾರಣ ಈಗ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಕೊವಿಡ್ ಬಳಿಕ ಬಿಎಂಟಿಸಿಯ 6500 ಬಸ್‌ಗಳ ಪೈಕಿ ಕೇವಲ 4500ಸಾವಿರ ಬಸ್‌ಗಳು ಸಂಚಾರ ಆರಂಭಿಸಿದ್ವು. ಈಗ ಬಸ್‌ಗಳ ಸಂಚಾರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಸಂಪರ್ಕಿಸಲು ಬಿಬಿಎಂಪಿಯಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ. ರಜೆ ಹಾಕುತ್ತಿರುವುದಕ್ಕೆ ಸೂಕ್ತ ಕಾರಣವನ್ನೂ ನೀಡಿಲ್ಲ. ಈಗಾಗಲೇ ಕೆಲಸಕ್ಕೆ ಹಾಜರಾಗುತ್ತಿರುವವರಿಗೆ ಡ್ಯೂಟಿ ಸಿಗುತ್ತಿಲ್ಲ. ಸಿಬ್ಬಂದಿ ರಜೆ ಕಟ್ ಮಾಡಿಕೊಂಡು ವೇತನವಿಲ್ಲದೆ ಕಳಿಸ್ತಿದ್ದಾರೆ. ಈಗಾಗಲೇ ಬಿಎಂಟಿಸಿ ನೌಕರರ ಎಲ್ಲ ರಜೆಗಳು ಖಾಲಿಯಾಗಿವೆ ಎಂದು ಸಾರಿಗೆ ನೌಕರರೊಬ್ಬರು ಕಿಡಿಕಾರಿದ್ದಾರೆ.



