ಬೆಂಗಳೂರು : ಫೆಬ್ರವರಿ 1ರಿಂದ ಮೊದಲು 9ನೇ ತರಗತಿ, ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿಯನ್ನು ಅರ್ಧ ದಿನದ ಬದಲಾಗಿ ಪೂರ್ಣ ದಿನದ ತರಗತಿ ಆರಂಭಿಸಲಾಗುತ್ತದೆ. ಫೆಬ್ರವರಿ 2ನೇ ವಾರದಲ್ಲಿ ಮಕ್ಕಳ ಹಾಜರಾತಿ ಗಮನಿಸಿ, ಮುಂದಿನ ತರಗತಿ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. Breaking news: ಜೂನ್ 14 ರಿಂದ SSLC ಪರೀಕ್ಷೆ: ಸುರೇಶ್ ಕುಮಾರ್
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಅವರು, ಸದ್ಯಕ್ಕೆ 1 ರಿಂದ 5ರವರೆಗೆ ಶಾಲೆ ಓಪನ್ ಇಲ್ಲ. ಇಲ್ಲಿ ವಿದ್ಯಾಗಮ ಪಾಠ ನಡೆಯಲಿದೆ. ಬೇರೆ ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ಚರ್ಚೆ ಮಾಡಿ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಫೆ.6ರಿಂದ 6,7,8,9 ಹಾಗೂ ಪಿಯುಸಿ ತರಗತಿ ಆರಂಭದ ಬಗ್ಗೆ ಸಲಹೆ ನೀಡಿದೆ. ಆದರೆ ಫೆಬ್ರವರಿ 1ನೇ ತಾರೀಕಿನಿಂದ ಹೈಸ್ಕೂಲ್ ನಿಂದ 9ನೇ ತರಗತಿ, ಎಸ್ ಎಸ್ ಎಲ್ ಸಿ, ಪ್ರಥಮ ಪಿಯುಸಿ ಅರ್ಧ ದಿನದ ಬದಲಾಗಿ ಪೂರ್ಣ ದಿನದ ಅವಧಿಯಲ್ಲಿ ತರಗತಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ನಾವು ಫೆಬ್ರವರಿ 2ನೇ ವಾರದವರೆಗೆ ಈಗಿನ ಪರಿಸ್ಥಿತಿಯನ್ನು ಗಮನಿಸಿ 9 ರಿಂದ 12 ನೇ ತರಗತಿ 0 ಹಾಜರಾತಿ ಉಳಿದ ತರಗತಿ ಆರಂಭ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.