ದಾವಣಗೆರೆ: ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ, ಪಾದಚಾರಿ ಮಾರ್ಗ ಅಗೆದು ಹಾಕಿದ್ದಾರೆ. ಸಾರ್ಟ್ ಸಿಟಿ ಕಾಮಗಾರಿ ಹಿನ್ನಲೆ ಅಲ್ಲಲ್ಲಿ ಗುಂಡಿ ಅಗೆದಿದ್ದು, ಕಾಮಗಾರಿ ನಡೆಯವ ಸ್ಥಳದಲ್ಲಿ ಯಾವುದೇ ಸೂಚನ ಫಲಕ ಅಥವಾ ಹಗ್ಗ ಕಟ್ಟದಿರುವುದರಿಂದ ಇಂದು ವೃದ್ಧೆಯೊಬ್ಬರು ಆಯತಪ್ಪಿ ಗುಂಡಿಗೆ ಬಿದಿದ್ದಾರೆ.
ನಗರದ ಚಾಮರಾಜಪೇಟೆ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಹೋಗಲು ಬಾಕ್ಸ್ ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಈ ಬಾಕ್ಸ್ ಗುಂಡಿ ಕಾಮಗಾರಿಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದ ಹಿನ್ನಲೆ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಬರುತ್ತಿದ್ದ ವೃದ್ದೆ ಗುಂಡಿಗೆ ಬಿದ್ದಿದ್ದಾರೆ.

ವೃದ್ಧೆ ಗುಂಡಿಗೆ ಬಿದ್ದ ತಕ್ಷಣ ಸಾರ್ವಜನಿಕರು ಮೇಲಕ್ಕೆ ಎತ್ತಿದ್ದಾರೆ. ಸಾರ್ಟ್ ಸಿಟಿ ಅಧಿಕಾರಿಗಳು ಕಾಮಗಾರಿ ವೇಳೆ ಯಾವುದೇ ರೀತಿಯ ಎಚ್ಚರಿಕೆ ಫಲಕವಾಗಲಿ ಅಥವಾ ಸೂಕ್ತ ಮುನ್ನೆಚ್ಚರಿಕೆ ವಹಿಸಿದೆ ಇರುವುದು ಎದ್ದು ಕಾಣುತ್ತದೆ. ಇನ್ನು ಮುಂದೆಯಾದರೂ ಇಂತಹ ಘಟನೆಗಳು ಆಗದಂತೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಸಂಬಂಧಪಟ್ಟ ವರಿಗೆ ಸೂಚಿಸಬೇಕು. ವೃದ್ಧೆಯ ಆರೋಗ್ಯದ ಕಾಳಜಿ ವಹಿಸಬೇಕು ಎಂದು ನೆರದಿದ್ದ ಸಾರ್ವಜನಿಕರು ಆಗ್ರಹಿಸಿದ್ದಾರೆ.



