ಡಿವಿಜಿಸುದ್ದಿ.ಕಾಂ, ದಾವಣಗೆರೆ: ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯ ಮೂರನೇ ಹಂತದ ಕಾರ್ಯಕ್ರಮ ನಾಳೆ ಹಾವೇರಿ ಜಿಲ್ಲೆಯ ಕೂಡಲ ಮತ್ತು ನಾಗನೂರಲ್ಲಿ ನಡೆಯಲಿದೆ.

ನೆರೆ ಸಂತ್ರಸ್ತರಿಗೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ಅವರು ಖುದ್ದು ನೆರೆ ಪರಿಹಾರ ವಿತರಿಸಲಿದ್ದಾರೆ. ಇವತ್ತು ಸಿರಿಗೆರೆಯಿಂದ ಪ್ರಯಾಣಿಸಿದ ಹಾವೇರಿಗೆ ಪ್ರಯಾಣ ಬೆಳೆಸುವಾಗ ಮಾರ್ಗ ಮಧ್ಯದ ಹರಿಹರದ ತುಂಗಾಭದ್ರಾ ನದಿಗೆ ನಿರ್ಮಿಸಿರುವ ಬ್ಯಾರೇಜ್ , ತಡೆಗೋಡೆ ಮತ್ತು ನೀರಿನ ಪ್ರಮಾಣ ವೀಕ್ಷಿಸಿದರು.



