ಬೆಂಗಳೂರು: ಕಾಂಗ್ರೆಸ್ ವಿಐಪಿ ಸಂಸ್ಕೃತಿಯಿಂದ ಇನ್ನೂ ಹೊರಗೆ ಬಂದಿಲ್ಲ . ಅದು ಬರೋದು ಇಲ್ಲ. ಕಾಂಗ್ರೆಸ್ ಸಂತತಿ ಸಾಮ್ರಾಜ್ಯವನ್ನು ಇನನ್ನೂ ನೆಚ್ಚಿಕೊಂಡಿದೆ. ಅವರಿಗೆ ಬುದ್ಧಿ ಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಕೊರೋನಾ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಕೊರೊನಾ ಲಸಿಕೆ ಬಂದಿರುವುದು ಸಂತೋಷವಾಗಿದ್ದು, ಜೊತೆಗೆ ಸಾಕಷ್ಟು ಆಶ್ಚರ್ಯ ಉಂಟಾಗಿದೆ. ಕೇವಲ 10 ತಿಂಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಲಸಿಕೆ ಕಂಡು ಹಿಡಿದಿರುವುದು ಮಾನ್ಯ ಪ್ರಧಾನಿಗಳ ಇಚ್ಛಾಶಕ್ತಿಯನ್ನು ತೋರಿಸುತ್ತದೆ.
ವಿಜ್ಞಾನಿಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಉತ್ತೇಜನ ಕೊಟ್ಟಿರುವುದು ಗೊತ್ತಾಗುತ್ತದೆ. ವಿಜ್ಞಾನಿಗಳು 10 ತಿಂಗಳಿಂದ ಪಟ್ಟ ಶ್ರಮ ನಮಗೆಲ್ಲ ಲಸಿಕೆ ಸಿಕ್ಕಿದೆ. ಕಾಂಗ್ರೆಸ್ ವಿಐಪಿ ಕಲ್ಚರಲ್ ನಿಂದ ಿನ್ನೂ ಹೊರ ಬಂದಿಲ್ಲ. ಅವರನ್ನು ದೇವರೇ ರಕ್ಷಣೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.



