ಬೆಂಗಳೂರು : ಕೊರೊನಾದಿಂದ ಮುಚ್ಚಲ್ಪಟ್ಟಿದ್ದ ಕಾಲೇಜುಗಳು ನಾಳೆಯಿಂದ ( ಜ.15) ಪೂರ್ಣ ಪ್ರಮಾಣದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಆರಂಭವಾಗಲಿವೆ.
ಈಗಾಗಲೇ ಅಂತಿಮ ವರ್ಷದ ತರಗತಿಗಳು ಆರಂಭವಾಗಿದ್ದು, ಇದೀಗ ಪ್ರಥಮ ,ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ಆರಂಭವಾಗಲಿವೆ. ಕಾಲೇಜಿಗೆ ಬರಲು ಪೋಷಕರ ಸಮ್ಮತಿ ಕಡ್ಡಾಯ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.ಕೋವಿಡ್ ನಿಯಂತ್ರಣಕ್ಕೆ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿ ಜಾರಿ ಮಾಡಿದ್ದು, ಮಾರ್ಗಸೂಚಿಯಲ್ಲಿ ತರಗತಿಗೆ ಬರಲು ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ. ಆದರೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ ಎಂದು ತಿಳಿಸಿದೆ.
ತರಗತಿಗೆ ಬರಲು ಸಾಧ್ಯವಾಗದವರು ಆನ್ ಲೈನ್ ತರಗತಿ ಮುಂದುವರೆಸಬಹುದು. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆಸನದ ವ್ಯವಸ್ಥೆ, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಎಂದು ತಿಳಿಸಲಾಗಿದೆ.