ದಾವಣಗೆರೆ: ದುಗ್ಗಾವತಿಯ ಮದ್ಯ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಪಟ್ಟಂತೆ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮದ್ಯದ ಟ್ಯಾಂಕರ್ ವೈಲ್ಡಿಂಗ್ ಮಾಡುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು. ಇದರಿಂದ ಕಾರ್ಮಿಕ ರಘು ಬೆಂಕಿಗೆ ಆಹುತಿಯಾಗಿದ್ದರು. ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಸಕ್ಕರೆ ಕಾರ್ಖಾನೆ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಸೇರಿದ್ದಾಗಿದ್ದು, ಅವಘಡಕ್ಕೆ ಸಂಬಂಧಪಟ್ಟಂತೆ ಡಿಸ್ಟಿಲರೀಸ್ ಕಾರ್ಖಾನೆ ಮಾಲೀಕ ಟಿ.ಜಾನ್, ಕಂಪನಿ ವ್ಯವಸ್ಥಾಪಕ ಸೇಲ್ವಾರಾಜ್ ಮತ್ತು ಎಚ್.ಆರ್. ವ್ಯವಸ್ಥಾಪಕ ರತ್ನಾಕರ ವಿರುದ್ಧ ದೂರು ದಾಖಲಾಗಿದೆ.
ಈ ಅವಘಡದಿಂದ 25 ಕೋಟಿ ರೂಪಾಯಿ ನಷ್ಟವಾಗಿದ್ದು, 29 ಟ್ಯಾಂಕ್ ಸ್ಪಿರಿಟ್ ಬೆಂಕಿಗೆ ಆಹುತಿಯಾಗಿದೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



