ಬೆಂಗಳೂರು: ನಾನು ಮಂತ್ರಿ ಆಗುವ ಭರವಸೆ ಇದ್ದು, ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ ಎಂದು ಎಂಎಲ್ಸಿ ಆರ್. ಶಂಕರ್ ಹೇಳಿದ್ದಾರೆ.
ಸಿಎಂ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗಷ್ಟೇ ಸಿಎಂ ಬಳಿ ಮಾತಾಡಿ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ನೀನು ಸಚಿವ ಆಗ್ತೀಯಾ ಎಂದು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ತಡ ಆಗಿದೆ. ಈಗ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ ಎಂದರು.
ಇನ್ನು ನಾನು ಎಂದಿನಂತೆ ಸಿಎಂ ಭೇಟಿಗೆ ಹೋದೆ. ಅವರೇ ಹೇಳಿದರು, ನೀನು ಇನ್ನೆರಡು ಮೂರು ದಿನದಲ್ಲಿ ಮಂತ್ರಿ ಆಗ್ತೀಯಾ ಅಂತಾ. ನಾನು, ಉಮೇಶ್ ಕತ್ತಿ ಸಿಎಂ ಜೊತೆ ತಿಂಡಿ ಮಾಡಿದ್ವಿ. ಉಮೇಶ್ ಕತ್ತಿಗೂ ಇದನ್ನೇ ಹೇಳಿದರು. ಕತ್ತಿಯವರು ಸಹ ಅಹವಾಲು ಇಟ್ಟರು. ಇನ್ನು ಎರಡು ದಿನದಲ್ಲಿ ಮಂತ್ರಿ ಆಗ್ತಿರಾ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.