ನವದೆಹಲಿ: ಇಂಡೇನ್ ಗ್ಯಾಸ್ ಗ್ರಾಹಕರು ಇನ್ಮುಂದೆ ಎಲ್ಪಿಜಿ ಸಿಲಿಂಡರ್ಗಳ ಬುಕಿಂಗ್ ಬಹಳ ಸುಲಭ. ಕೇವಲ ಮಿಸ್ ಕಾಲ್ ಕೊಟ್ಟರೂ ಸಾಕು ನಿಮ್ಮ ಸಿಲಿಂಡರ್ ಬುಕ್ ಆಗಲಿದೆ. ದೇಶದ ಯಾವುದೇ ಮೂಲೆಯಲ್ಲಿರುವ ಇಂಡೇನ್ ಗ್ರಾಹಕರು 84549 55555 ಸಂಖ್ಯೆಗೆ ಒಂದೇ ಒಂದು ಮಿಸ್ಡ್ ಕಾಲ್ ಕೊಟ್ಟರೆ, ಸಿಲಿಂಡರ್ ಬುಕ್ ಆಗಲಿದೆ.
ಮಿಸ್ಡ್ ಕಾಲ್ಗಳ ಮೂಲಕ ಬುಕ್ಕಿಂಗ್ ರೀಫಿಲ್ ಮಾಡುವುದು ಗ್ರಾಹಕ ಕೇಂದ್ರಗಳಿಗೆ ಕರೆ ಮಾಡಿ ಸುದೀರ್ಘ ಸಮಯ ಕಾಯುವುದಕ್ಕಿಂತ ವೇಗವಾಗಿ ಬುಕ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಐವಿಆರ್ಎಸ್ ಕರೆಗಳಿಗೆ ಸಾಮಾನ್ಯ ಕರೆಗಳ ದರಗಳು ಅನ್ವಯವಾಗುವುದರಿಂದ ಈ ಹೊಸ ವಿಧಾನದಲ್ಲಿ ಯಾವುದೇ ಕರೆ ದರ ಕಡಿತವಾಗುವುದಿಲ್ಲ. ಐವಿಆರ್ಎಸ್ ಕರೆ ಹೊಂದಿಲ್ಲದವರು, ಕರೆಮಾಡಲು ಕಷ್ಟಪಡುವ ವೃದ್ಧ ಗ್ರಾಹಕರು ಹಾಗೂ ಗ್ರಾಮೀಣ ಭಾಗದ ದೊಡ್ಡ ಸಂಖ್ಯೆಯ ಜನರಿಗೆ ಇದರಿಂದ ನೆರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಮಿಸ್ಡ್ ಕಾಲ್ ಮೂಲಕ ಹೊಸ ಎಲ್ಪಿಸಿ ಸಂಪರ್ಕ ಪಡೆದುಕೊಳ್ಳುವ ಸೇವೆಯನ್ನು ಕೂಡ ಒಡಿಶಾದ ಭುವನೇಶ್ವರದಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ದೇಶದಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಎಲ್ಪಿಜಿ ಗ್ರಾಹಕರಿಗೆ ಮಿಸ್ಡ್ ಕಾಲ್ ಸೌಲಭ್ಯವನ್ನು ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು.