ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆ ಪೊಲೀಸರ ಕಟ್ಟುನಿಟ್ಟಿನ ಕ್ರಮದ ನಡುವೆಯೂ ನಿನ್ನೆ ಹೊಸ ವರ್ಷಾಚರಣೆಯಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ವಹಿವಾಟು ನಡೆದಿದೆ . ನಿನ್ನೆ ಒಂದೇ ದಿನ ಅಬಕಾರಿ ಇಲಾಖೆಗೆ ಸುಮಾರು 151 ಕೋಟಿಗೂ ಅಧಿಕ ವಹಿವಾಟು ನಡೆದಿದೆ.
ನಿನ್ನೆ ಬೆಳಗ್ಗೆಯಿಂದ ರಾತ್ರಿಗೆ ಮುಕ್ತಾಯಗೊಂಡ ವಹಿವಾಟಿನಲ್ಲಿ ಸುಮಾರು 2.23 ಲಕ್ಷ ಭಾರತೀಯ ಮದ್ಯ(120 ಕೋಟಿ 21 ಲಕ್ಷ) ಹಾಗೂ 1.73 ಲಕ್ಷ ಕಾಟನ್ಬಾಕ್ಸ್ನ ಬೀರುಗಳು ಮಾರಾಟವಾಗಿವೆ. ಇದು 31ಕೋಟಿಯಷ್ಟಾಗಿದೆ. ಇದರೊಂದಿಗೆ ಒಂದೇ ದಿನ ಸುಮಾರು 151 ಕೋಟಿಗೂ ಅಧಿಕ ಮದ್ಯ ವಹಿವಾಟು ನಡೆದಿದೆ.
ಎಂಎಸ್ಐಎಲ್, ಔಟ್ಲಿಟ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸುಮಾರು ರಾತ್ರಿ 11 ಗಂಟೆವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಇದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಮದ್ಯವನ್ನು ಖರೀದಿಸಿದ್ದಾರೆ. ಕಳೆದ ಮಾರ್ಚ್ನಲ್ಲಿ ಕೋವಿಡ್ ಕಾಣಿಸಿಕೊಂಡ ಪರಿಣಾಮ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಲಾಕ್ಡೌನ್ ತೆರವುಗೊಳಿಸದ ಬಳಿಕ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ನಿನ್ನೆ ನಡೆದ ವಹಿವಾಟು ಈ ವರ್ಷದಲ್ಲಿ ಅಧಿಕ ಪ್ರಮಾಣದ್ದಾಗಿದೆ.