ಉಡುಪಿ: ಕೊರೊನಾ ಹಿನ್ನೆಲೆ ಸರ್ಕಾರ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ನೀಡಿದೆ. ಆದರೆ, ಹೊಸ ವರ್ಷವನ್ನು ಸ್ವಾಗತಿಸುವ ಸಲುವಾಗಿ ರಸ್ತೆಯ ಮೇಲೆ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಹೋಗಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಶರಣ್ ಹಾಗೂ ಸಿದ್ದು ಮೃತ ದುರ್ದೈವಿಗಳು. ಹೊಸ ವರ್ಷಕ್ಕೆ ಶುಭ ಸಂದೇಶವನ್ನು ರಸ್ತೆ ಮೇಲೆ ಬರೆಯಲು ಮುಂದಾದಾಗ ವೇಗವಾಗಿ ಬಂದ ಕಾರು ಯುವಕರಿಗೆ ಮೇಲೆ ಹರಿದಿದೆ. ಓರ್ವ ಸ್ಥಳದಲ್ಲೇ ಅಸುನೀಗಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇಬ್ಬರು ಟಿಪ್ಪರ್ ಡ್ರೈವರ್ ಗಳಾಗಿದ್ದು, ಮೂಲತ: ಬಾಗಲಕೋಟೆಯವರು. ಕಾರ್ಕಳದ ಮೀಯಾರು ಕಾಜರ ಬೈಲು ಎಂಬಲ್ಲಿ ರಸ್ತೆ ಮೇಲೆ ಹ್ಯಾಪಿ ನ್ಯೂ ಇಯರ್ ಬರೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.