ಬೆಂಗಳೂರು: ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಯಾರಾದರೂ ಒಬ್ಬರು ಹುತಾತ್ಮರಾದ್ದಾರೆಯೇ? ಬ್ರಿಟಿಷ್ ರಿಗೆ ಬರೆದುಕೊಡೋದು ಬಿಜೆಪಿಯವರ ದೇಶಭಕ್ತಿಯೇ? ದೇಶಭಕ್ತಿ ಬಿಜೆಪಿಯ ಆಸ್ತಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಗಾಂಧೀಜಿ ಅವರ ಹಿಂದುತ್ವ ಪಾಲನೆ ಮಾಡುತ್ತಿದ್ದೇವೆ. ಬಿಜೆಪಿಯವರದ್ದು ಸಾರ್ವಕರ್ ಹಿಂದುತ್ವ. ನಾನೂ, ಡಿ.ಕೆ ಶಿವಕುಮಾರ್ ಹಿಂದೂಗಳು. ಆದರೆ ಚುನಾವಣೆಗಾಗಿ ಬಿಜೆಪಿಯವರು ಹಿಂದೂತ್ವವನ್ನು ಚರ್ಚೆ ಮಾಡುತ್ತಾರೆ ಎಂದರು.
ಜಾತಿ ವ್ಯವಸ್ಥೆಯನ್ನು ಫೋಷಣೆ ಮಾಡುವವರಿಗೆ ಯಾವುದೇ ಐಡಿಯಾಲಜಿ ಇಲ್ಲ. ಕಾಂಗ್ರೆಸ್ ನವರು 73 ವರ್ಷ ಏನು ಮಾಡಿದ್ದರೂ ಅಂತ ಬಿಜೆಪಿಯವರು ಕೇಳುತ್ತಾರೆ, ಈ ದೇಶಕ್ಕೆ ಸಂವಿಧಾನ ತಂದಿದ್ದೇ ಕಾಂಗ್ರೆಸ್ ಎಂದರು .
ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ಸಾಮಾಜಿಕ ನ್ಯಾಯದ ವಿರುದ್ಧವಾಗಿ ಬಿಜೆಪಿಯವರು ನಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಸಾಂಪ್ರಾದಾಯಿಕ ಮತಗಳು ಎಲ್ಲವೂ ಛಿದ್ರವಾಗಿದೆ. ಅದನ್ನು ಮತ್ತೆ ಒಗ್ಗೂಡಿಸುವ ಕೆಲಸ ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.
ವಿದೇಶಕ್ಕೆ ಹಾರಿದ ರಾಹುಲ್ ; ಕಾಂಗ್ರೆಸ್ ಸಂಸ್ಥಾಪನಾ ದಿನಕ್ಕೆ ಗೈರು



