Connect with us

Dvgsuddi Kannada | online news portal | Kannada news online

ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತ ವಿರುದ್ಧ ದಾಳಿ: ಶೋಯೆಬ್ ಅಖ್ತರ್

ಅಂತರಾಷ್ಟ್ರೀಯ ಸುದ್ದಿ

ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತ ವಿರುದ್ಧ ದಾಳಿ: ಶೋಯೆಬ್ ಅಖ್ತರ್

ನವದೆಹಲಿ : ಕಾಶ್ಮೀರ ವಶಪಡಿಸಿಕೊಂಡ ನಂತರ ಭಾರತದ ಮೇಲೆ ದಾಳಿ ಮಾಡುತ್ತೇವೆ ಎಂದು  ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​ ಅವರ ಹೇಳಿಕೆಯ ವಿಡಿಯೋ  ವೈರಲ್ ಆಗಿದೆ. ಈ ವಿಡಿಯೋದಲ್ಲಿ ಘಝ್ವಾ ಏ ಹಿಂದ್​ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಅಖ್ತರ್​, ಮೊದಲು ಕಾಶ್ಮೀರವನ್ನು ವಶಪಡಿಸ್ತೇವೆ. ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಸಮಾ ಟಿವಿಗೆ ಸಂದರ್ಶನ ನೀಡಿದ ಅಖ್ತರ್,  ಶಮಲ್ ಮಶ್ರಿಕ್​​ (ಅರೇಬಿಯನ್ ಪೆನಿನ್ಸುಲಾದಿಂದ ಉತ್ತರಕ್ಕೆ ಇರುವ ಪ್ರದೇಶವಾಗಿದ್ದು, ಉರ್ದು ಭಾಷೆಯಲ್ಲಿರುವ ಉಲ್ಲೇಖವಾಗಿದೆ) ನಿಂದ ಸಶಕ್ತ ಸೇನೆ ಉದಯಿಸಲಿದೆ. ಉಜ್ಬೇಕಿಸ್ತಾನ್​ನಿಂದಲೂ ವಿವಿಧ ಶಕ್ತಿಗಳು ನಮ್ಮೊಡನೆ ಕೈ ಜೋಡಿಸಲಿವೆ. ಇವೆಲ್ಲವೂ ಖೊರಾಸಾನ್​ ಅನ್ನು ಉಲ್ಲೇಖಿಸುತ್ತಿದ್ದು, ಐತಿಹಾಸಿಕ ಪ್ರದೇಶ ಲಾಹೋರ್ ತನಕ ವಿಸ್ತರಿಸಲ್ಪಡಲಿದೆ. ನಮ್ಮ ಸೇನೆ ಅಫ್ಘಾನಿಸ್ತಾನದಿಂದ ಅಟಾಕ್​ ತನಕ ತಲುಪಲಿದ್ದು, ಅಟಾಕ್​​ನಲ್ಲಿರುವ ನದಿಯಲ್ಲಿ ಎರಡು ಬಾರಿ ರಕ್ತ ಪ್ರವಾಹವೇ ಹರಿಯಲಿದೆ. ಘಝ್ವಾ ಏ ಹಿಂದ್​ ನಡೆಯಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆದಿದೆ.

ಘಝ್ವಾ-ಏ-ಹಿಂದ್ ಪದವನ್ನು ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಪಾಕಿಸ್ತಾನದಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳೂ ಬಳಸುತ್ತಿವೆ. ಈ ಪರಿಕಲ್ಪನೆಯ ಪ್ರಕಾರ, ಸಿರಿಯಾದಿಂದ ಈ ಯುದ್ಧ ಆರಂಭವಾಗಿ ಕಪ್ಪು ಬಾವುಟ ಹಿಡಿದ ಶಕ್ತಿ ಭಾರತವನ್ನು ಅತಿಕ್ರಮಿಸಲಿದೆ. ಇಸ್ಲಾಮಿಕ್ ಸ್ಟೇಟ್​ ಸ್ಥಾಪಿಸುವ ಉದ್ದೇಶದ ಈ ಯುದ್ಧಕ್ಕೆ ಪೂರಕವಾಗಿ ಆಗ ಹಿಂದು ಮತ್ತು ಮುಸಲ್ಮಾನರ ನಡುವೆ ಭೀಕರ ಹೊಡೆದಾಟ ನಡೆಯಲಿದೆ. ಇದರಲ್ಲಿ ಮುಸ್ಲಿಮರಿಗೆ ಭಾರತದಲ್ಲಿರುವ ಹಿಂದುಗಳ ವಿರುದ್ಧ ನಿರ್ಣಾಯಕ ಗೆಲುವು ಸಿಗಲಿದೆ. ಭಾರತದಲ್ಲಿ ಉಗ್ರಕೃತ್ಯಗಳಿಗೆ ಉಗ್ರರನ್ನು ನಿಯೋಜಿಸುವಾಗ ಜೈಷ್​ ಏ ಮೊಹಮ್ಮದ್ (ಜೆಇಎಂ) ನಿರಂತರವಾಗಿ ಇದನ್ನೇ ಬೋಧಿಸಿ, ಅವರನ್ನು ಪ್ರಚೋದಿಸುತ್ತಿದೆ ಎಂದಿದ್ದಾರೆ .

ಅಖ್ತರ್​ಗೆ  ಈ ಹೇಳಿಕೆಗೆ ವ್ಯಾಪಕ ವಿವಾದ ಸೃಷ್ಟಿಸಿದೆ. ಪರ – ವಿರೋಧದ ಟೀಕೆಗಳು ವ್ಯಕ್ತವಾಗಿವೆ. ಘಝ್ವಾ ಏ ಹಿಂದ್ ಅಂದರೆ ಭಾರತದ ವಿರುದ್ಧ ಧರ್ಮಯುದ್ಧ ಎಂದು ಅರ್ಥ ಬರುತ್ತದೆ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

To Top