ದಾವಣಗೆರೆ : ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ವ್ಯಾಪ್ತಿಯ ಹರಿಹರ ತಾಲ್ಲೂಕು ಮಲೇಬೆನ್ನೂರು ಹೋಬಳಿಯ ವಿವಿಧ ಭಾಗಗಳಲ್ಲಿ ನೀರಾವರಿ ಇಲಾಖೆ ಹಾಗೂ ಕಾಡ ಸಹಭಾಗಿತ್ವದಲ್ಲಿ ನಾಲೆ ಹೂಳು ಎತ್ತುವ ಕಾರ್ಯ ಭರದಿಂದ ಸಾಗಿದೆ. ಈ ಕಾಮಗಾರಿಯನ್ನುಇಂದು ಇಲಾಖೆಯ ಅಧಿಕಾರಿಗಳೊಂದಿಗೆ ಕಾಡಾ ಅಧ್ಯಕ್ಷೆ ಪವಿತ್ರರಾಮಯ್ಯ ವೀಕ್ಷಿಸಿದರು.
ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಕಾಡ ವ್ಯಾಪ್ತಿಗೊಳಪಡುವ ಅನೇಕ ಭಾಗಗಳಲ್ಲಿ ಪ್ರವಾಸ ಕೈಗೊಂಡ ಸಂಧರ್ಭದಲ್ಲಿ ಅಚ್ಚುಕಟ್ಟು ಭಾಗದ ರೈತರಿಗೆ ಸರಾಗವಾಗಿ ನೀರು ಹರಿಯುತ್ತಿಲ್ಲ ರೈತರು ದೂರು ನೀಡಿದ್ದರು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಳೆದ ವಾರ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಜನವರಿ ತಿಂಗಳಲ್ಲಿ ಜಲಾಶಯದಿಂದ ಮತ್ತೊಮ್ಮೆ ಕಾಲುವೆಗಳಿಗೆ ನೀರು ಹರಿಸಲಿದ್ದು, ತಕ್ಷಣವೇ ಹೊಳು ತೆಗೆಯುವಂತೆ ಸೂಚಿಸಿದ್ದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ವೇಳೆ ನೀರಾವರಿ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳು, ರೈತ ಮುಖಂಡ ಪಾಲಾಕ್ಷಪ್ಪ, ರುದ್ರಪ್ಪ ಗ್ರಾಮದ ಮುಖಂಡರು ಉಪಸ್ಥಿತಿರಿದ್ದರು.