ಡಿವಿಜಿ.ಸುದ್ದಿ.ಕಾಂ, ಚನ್ನಗಿರಿ: ತಾಲೂಕಿನ ಕೆಂಪನಹಳ್ಳಿ ಗ್ರಾಮದ ಎಚ್. ಮಂಜುನಾಥ್ ಅವರು ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯ ಡಿಸಿಆರ್ ಬಿಯಿಂದ ಸಿಪಿಐ ಆಗಿ ಪದನ್ನೊತಿ ಹೊಂದಿ ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ನಲ್ಲಿ ಕಾರ್ಯನಿರ್ವಹಿಸಿ, ಪುನಃ ಭದ್ರಾವತಿ ಪಟ್ಟಣಕ್ಕೆ ಸಿಪಿಐ ವರ್ಗಾವಣೆಗೊಂಡಿದ್ದಾರೆ.
ದಕ್ಷ ಅಧಿಕಾರಿ ರವಿ ಡಿ ಚನ್ನಣ್ಣನವರ ಜೊತೆ ಕಾರ್ಯನಿರ್ವಹಿಸಿದ ಅನುಭವ ಸಿಪಿಐ ಮಂಜುನಾಥ್ ವರ್ಗಾವಣೆಯಿಂದ ಭದ್ರಾವತಿ ರೌಡಿಗಳಿಗೆ ಚಳಿಜ್ವರ ಕಾಡುವುದಂತಾಗಿದೆ. ಬಡ ಕುಟುಂಬದಲ್ಲಿ ಜನಿಸಿ ಮಂಜುನಾಥ್, ದಾವಣಗೆರೆ ಜಿಲ್ಲೆಯಲ್ಲಿ ವಿಧ್ಯಾಭ್ಯಾಸ ಮುಗಿಸಿ 2005 ರಲ್ಲಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದರು.
ಬೆಂಗಳೂರು ನಗರ ಸೇರಿದಂತೆ , ಬಳ್ಳಾರಿ , ಹಾಗೂ ಶಿವಮೊಗ್ಗ ನಗರದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ ದಕ್ಷ ಪೊಲೀಸ್ ಅಧಿಕಾರಿಗಳಾದ ರವಿ ಚನ್ನಣ್ಣನವರ ಗರಡಿಯಲ್ಲಿ ಬೆಳೆದವರು. ರೌಡಿಗಳ ಪಾಲಿಗೆ ಮಂಜುನಾಥ್ ಸಹ ಸಿಂಹ ಸ್ವಪ್ನವಾಗಿದ್ದು, ಆಗುಂಬೆ , ಸೊರಬ , ಹೊಳೆಹೊನ್ನೂರು , ಶಿವಮೊಗ್ಗ ಕಾರ್ಯ ನಿರ್ವಹಿಸಿದ್ದರು. ಇದೀಗ ಪುನಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣಕ್ಕೆ ಸಿಪಿಐ ವರ್ಗಾವಣೆಗೊಂಡಿರುವುದು ಕೆಂಪನಹಳ್ಳಿ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.



