ಪೊನ್ನಂಪೇಟೆ : ಪತ್ನಿ, ಮಕ್ಕಳನ್ನು ನೋಡಿಕೊಳ್ಳಲಾರದವರು ಹೇಡಿಗಳು. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಪೊನ್ನಂಪೇಟೆಯಲ್ಲಿ ಮಾತನಾಡಿದ ಅವರು, ಕೃಷಿ ಮಾಡಿ ರೈತರು ಉತ್ತಮ ಜೀವನ ನಡೆಸುವವರಿದ್ದಾರೆ. ಹೇಡಿ ಕೆಲಸಕ್ಕೆ ರೈತರು ಮುಂದಾಗಬಾರದು. ಪತ್ನಿ, ಮಕ್ಕಳನ್ನು ನೋಡಿಕೊಳ್ಳಲಾರದವನು ಹೇಡಿ. ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೇಡಿ ಕೆಲಸಕ್ಕೆ ರೈತರು ಮುಂದಾಗಬಾರದು ಎಂದು ಹೇಳಿದ್ದರು. ಕಾರ್ಯಕ್ರಮ ಭಾಷಣದಲ್ಲಿ ಈ ಹೇಳಿಕೆ ನೀಡಿದ ಸಚಿವರು, ಕಾರ್ಯಕ್ರಮ ನಂತರವೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕೃಷಿ ಸಚಿವರ ಹೇಳಿಕೆಗೆ ರೈತರಪರ ಸಂಘಟನೆಗಳು ಟೀಕಿಸಿವೆ.



