ನವದೆಹಲಿ : ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಮಸೂದೆ ಜಾರಿಗೆ ತರುವ ಮೂಲಕ ರೈತರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿ ಪಂಜಾಬ್ ಮಾಜಿ ಸಿಎಂ ಹಾಗೂ ಅಕಾಲಿ ದಳದ ಪ್ರಮುಖ ಪ್ರಕಾಶ್ ಸಿಂಗ್ ಬಾದಲ್ ಪದ್ಮ ವಿಭೂಷಣ ವನ್ನು ವಾಪಸ್ ನೀಡಿದ್ದಾರೆ.
ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಮತ್ತು ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು ಪದ್ಮ ವಿಭೂಷಣ ವನ್ನು ವಾಪಸ್ ನೀಡಿ, ರೈತರಿಗೆ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಶಿರೋಮಣಿ ಅಕಾಲಿದಳ ವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಿಂದ (ಎನ್ ಡಿಎ) ಕೃಷಿ ಮಸೂದೆಗ ವಿರೋಧಿಸಿ ಹೊರ ನಡೆದಿತ್ತು. ಬಿಜೆಪಿ ನೇತೃತ್ವದ ಸರಕಾರ ತಂದಿರುವ ಕೃಷಿ ಮಸೂದೆ ರೈತರಿಗೆ ಮಾರಕವಾಗಿವೆ ಎಂದು ಸುಖ್ ಬೀರ್ ಬಾದಲ್ ಹೇಳಿದ್ದಾರೆ. ಬಿಜೆಪಿ ಹಿರಿಯ ಮಿತ್ರಪಕ್ಷವಾದರೂ ರೈತರ ಭಾವನೆಗಳಿಗೆ ಬೆಲೆ ನೀಡುವ ಲ್ಲಿ ಸರಕಾರ ಕಿವಿಗೊಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.



