ಚಿತ್ರದುರ್ಗ: ಆಡಳಿತಾತ್ಮಕ ದೃಷ್ಟಿಯಿಂದ ವಿಜಯನಗರ ಜಿಲ್ಲೆ ಮಾಡಲು ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ರಾಮುಲು ಪಡೆಗೆ ಯಾವುದೇ ಹಿನ್ನಡೆಯಾಗುವ ಪ್ರಶ್ನೆ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬಳ್ಳಾರಿ ದೊಡ್ಡ ಜಿಲ್ಲೆಯಾಗಿತ್ತು, ಇದನ್ನ ವಿಭಜಿಸುವ ಮೂಲಕ ಸಿಎಂ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಸೋಮಶೇಖರ್ ರೆಡ್ಡಿ ಅವರಿಗೆ ಅಸಮಾಧಾನವಿಲ್ಲ. ಅವರನ್ನ ನಾನು, ಸಿಎಂ ಇಬ್ಬರೂ ಮನವೊಲಿಸಿದ್ದೇವೆ ಎಂದು ಹೇಳಿದರು.
ಇನ್ನು ಮೊಳಕಾಲ್ಮೂರು ತಾಲ್ಲೂಕನ್ನು ಬಳ್ಳಾರಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿ ಅಖಂಡವಾಗಿದ್ದ ಜಿಲ್ಲೆ, ಇಂದು ಪ್ರತ್ಯಕ ಜಿಲ್ಲೆಯಾಗಿದೆ. ಮೊಳಕಾಲ್ಮೂರು ಜನ ಆರ್ಟಿಕಲ್ – 371ಜೆಗೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಯಾವ ರೀತಿ ತೀರ್ಮಾನ ಕೈಗೊಳ್ಳಬೇಕು ಎಂದು ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಮೊಳಕಾಲ್ಮೂರು 371ಜೆಗೆ ಸೇರ್ಪಡೆ ಆದರೆ ಉತ್ತಮವೆಂದು ಹೇಳಿದರು.



