ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ 103 ನೇ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್ , ದೇಶದ ಜನತೆ ಇಂದಿಗೂ ಕೂಡ ಇಂದಿರಾ ಗಾಂದಧಿಯವರನ್ನು ಬಡವರ ತಾಯಿ ಎಂದೇ ನೆನಪು ಮಾಡಿಕೊಳ್ಳುತ್ತಾರೆ. ಇಂದಿರಾಜಿ ಅವರು ಬಾಲ್ಯದಿಂದಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡು ಗಾಂಧೀಜಿ ಹಾಗೂ ನೆಹರುರವರಿಗೆ ನೆರವಾಗುತ್ತಿದ್ದರು. ಸ್ವಾತಂತ್ರ್ಯದ ನಂತರ ತಮ್ಮ ತಂದೆಯಾದ ನೆಹರೂಜಿಯವರ ಜೊತೆಗೂಡಿ ದೇಶವಿದೇಶಗಳಿಗೆ ತೆರಳಿ ಅನುಭವ ಪಡೆದುಕೊಂಡರು. ಬಳಿಕ ದೇಶದ ಚುಕ್ಕಾಣಿ ಹಿಡಿದು ದಿಟ್ಟತನದಿಂದ ಆಡಳಿತ ನಡೆಸಿದ ಧೀಮಂತ ಮಹಿಳೆ. 15 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯ್ದಿದ್ದರು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಮಾತನಾಡಿ ಉಳುವವನೆ ಹೊಲದೊಡೆಯ ಎಂಬ ಕಾರ್ಯಕ್ರಮದ ಮೂಲಕ ಇಂದಿರಾಜಿ ಬಡವರಿಗೆ ನೆರವು ನೀಡಿದ್ದರು ಆದರೆ ಇಂದಿನ ಬಿಜೆಪಿ ಸರ್ಕಾರ ಉಳ್ಳವನೇ ಹೊಲದೊಡೆಯ ಎಂಬ ಕಾನೂನು ಜಾರಿ ಮಾಡುವ ಮೂಲಕ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಲವಾರು ಯೋಜನೆಗಳನ್ನು ಖಾಸಗೀಕರಣ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ಭವ್ಯ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಸುಧಾ ಇಟ್ಟಿಗುಡಿ, ಮುಖಂಡರಾದ ಬಿ.ಹೆಚ್ ವೀರಭದ್ರಪ್ಪ, ಮೈನುದ್ದೀನ್, ಲಿಯಾಖತ್, ಅನಿತಾಬಾಯಿ, ಸುಷ್ಮಾ ಪಾಟೀಲ್,ಇಬ್ರಾಹಿಂ ಖಲೀಲ್, ರಹೀಂ ಮತ್ತಿತರರಿದ್ದರು.



