ಬೆಂಗಳೂರು: ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್ ಸಮಿಟ್-2020’ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಸಿಎಂಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಜಗದೀಶ್ ಶೆಟ್ಟರ್ ಸಾಥ್ ನೀಡಿದರು. .
ಇಂದಿನಿಂದ ನ. 21ರ ವರೆಗೆ ನಡೆಯುವ ಶೃಂಗದಲ್ಲಿ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದು , 250 ಪ್ರದರ್ಶಕರು ಭಾಗವಹಿಸಲಿದ್ದಾರೆ. ಆರೋಗ್ಯ, ಕೃಷಿ, ವಿಪತ್ತು ನಿರ್ವಹಣೆಗೆ ಡ್ರೋಣ್ ಮತ್ತು ರೋಬೊಟಿಕ್ಗಳ ಮೂಲಕ ಪರಿಹಾರ, ಡಿಜಿಟಲ್ ಹೆಲ್ತ್ ಕೇರ್, ಸಾರ್ವಜನಿಕ ಸಾರಿಗೆಯಲ್ಲಿ ತಂತ್ರಜ್ಞಾನ, ಕೃಷಿ ಉದ್ಯಮ, ಸೈಬರ್ ಸೆಕ್ಯುರಿಟಿ, ಉಪಗ್ರಹ ಮತ್ತು ಸಮಾಜ ಸೇರಿದಂತೆ 70ಕ್ಕೂ ಅಧಿಕ ಗೋಷ್ಠಿಗಳು ನಡೆಯಲಿವೆ.
ನೆಕ್ಸ್ಟ್ ಈಸ್ ನೌ ಶೀರ್ಷಿಕೆ ಅಡಿ ಭವಿಷ್ಯವನ್ನು ಈಗಲೇ ಕಂಡುಕೊಳ್ಳುವ ಪ್ರಯತ್ನ ಈ ಮೇಳದಲ್ಲಿ ನಡೆಯಲಿದೆ. ಮೇಳದಲ್ಲಿ 25ಕ್ಕೂ ಹೆಚ್ಚು ದೇಶಗಳಪ್ರತಿನಿಧಿಗಳು,ವಿವಿಧ ದೇಶಗಳ ರಾಯಭಾರಿಗಳು ಭೌತಿಕವಾಗಿ ಹಾಗೂ ಕೆಲವರು ವರ್ಚುವಲ್ ಆಗಿ ಪಾಲ್ಗೊಳ್ಳಲಿದ್ದಾರೆ.



