Connect with us

Dvgsuddi Kannada | online news portal | Kannada news online

ಕರ್ನಾಟಕ ಯೋಜನಾ ಆಯೋಗದ ಸದಸ್ಯರಾಗಿ ಡಾ.ಕೆ.ಪಿ.ಬಿ.ನಾಮ ನಿರ್ದೇಶನ

ಪ್ರಮುಖ ಸುದ್ದಿ

ಕರ್ನಾಟಕ ಯೋಜನಾ ಆಯೋಗದ ಸದಸ್ಯರಾಗಿ ಡಾ.ಕೆ.ಪಿ.ಬಿ.ನಾಮ ನಿರ್ದೇಶನ

ಬೆಂಗಳೂರು: ಕರ್ನಾಟಕ ಜ್ಞಾನ ಆಯೋಗದ ವಿಶ್ರಾಂತ ಸದಸ್ಯರಾಗಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ಸಲಹೆಗಾರರಾದ  ಸರಳತೆ, ಸದ್ವೀನಯದ  ಪ್ರತಿರೂಪದಂತಿರುವ ಡಾ. ಕೆ.ಪಿ.ಬಸವರಾಜಪ್ಪನವರು ಕರ್ನಾಟಕ ಸರ್ಕಾರದ  ಪ್ರತಿಷ್ಠಿತ  ಆಯೋಗವಾದ ಕರ್ನಾಟಕ ರಾಜ್ಯ ಯೋಜನಾ ಆಯೋಗದ  ಸದಸ್ಯರನ್ನಾಗಿ ನೇಮಿಸಿ ಸರ್ಕಾರವು ಆದೇಶಿಸಿದೆ.

ರಾಜ್ಯ ಯೋಜನಾ ಮಂಡಳಿಯು ರಾಜ್ಯದ ಅಭಿವೃದ್ಧಿಯಲ್ಲಿ ಜಿಲ್ಲೆಗಳ ಸಕ್ರಿಯ ಪಾಲ್ಗೊಳ್ಳುವಿಕೆ, ಕ್ಷೇತ್ರಗಳ ಆದ್ಯತೆ, ವಾರ್ಷಿಕ ಮತ್ತು  ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವುದು. ಸ್ವಾಭಾವಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಸದ್ಬಳಕೆ, ಪ್ರಾಂತೀಯ ಅಸಮತೋಲನ ನಿರ್ಮೂಲನೆ,ಆರ್ಥಿಕ ಸುಧಾರಣೆ, ಬಂಡವಾಳ ಹೂಡಿಕೆ, ರಾಷ್ಟ್ರೀಯ ಯೋಜನೆಗಳಿಗೆ ರಾಜ್ಯದ ಚೌಕಟ್ಟಿನಲ್ಲಿ  ಆದ್ಯತೆ ಮತ್ತು ಸಲಹೆ, ಸಂಶೋಧನಾ ಅಧ್ಯಯನ ಮತ್ತು ವಿಚಾರ ಸಂಕಿರಣಗಳ ಮೂಲಕ ಸರ್ಕಾರಕ್ಕೆ  ಸಲಹೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರು ಹಾಗೂ  ವೈದ್ಯರು  ಹಾಗೂ ಇತರ ಪಾಲುದಾರರ ಸಹಯೋಗದಲ್ಲಿ  ಜ್ಞಾನ, ನಾವಿನ್ಯತೆ, ಉದ್ಯಮ ಶೀಲತೆಯ ಅನುಷ್ಠಾನ , ರಾಜ್ಯದ ಅಭಿವೃದ್ಧಿಯ ಕಾರ್ಯಸೂಚಿಯನ್ನು  ಮತ್ತೊಷ್ಟು ಕಾರ್ಯಗತಗೊಳಿಸುವ ಚಟುವಟಿಕೆಗಳನ್ನು ಆಯೋಜಿಸುವ ಬುದ್ದಿವಂತರ  ಚಾವಡಿಯಾಗಿದೆ.

ಕರ್ನಾಟಕ ರಾಜ್ಯ ಯೋಜನಾ ಆಯೋಗದ   ಸದಸ್ಯರನ್ನಾಗಿ ನೇಮಿಸಿ ಆದೇಶಿಸಿರುವ ಡಾ.ಕೆ.ಪಿ.ಬಸವರಾಜಪ್ಪನವರು ಅತ್ಯಂತ  ಅನುಭವಿ ಮತ್ತು  ಕ್ರೀಯಾಶೀಲ ವ್ಯಕ್ತಿತ್ವದವರಾಗಿದ್ದು ಸರ್ಕಾರವು ಇವರನ್ನು  ಆಯ್ಕೆ ಮಾಡಿರುವುದು  ಹುದ್ದೆಯ ಗೌರವವವನ್ನು ಹೆಚ್ಚಿಸಿದಂತಾಗಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ ಡಾ.ಕೆ.ಪಿ.ಬಸವರಾಜಪ್ಪನವರು ಐಐಎಂನಲ್ಲಿ ಸಂಶೋಧಕರಾಗಿ ಸೇವೆಸಲ್ಲಿಸಿ  ನಿವೃತ್ತರಾಗಿದ್ದು, ವಿಜ್ಞಾನದಲ್ಲಿ ಪದವಿಯನ್ನು   ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು   ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ಮತ್ತು ಭಾರತದಲ್ಲಿ ಇ-ಗವರ್ನೆನ್ಸ್ ಇನಿಶಿಯೇಟಿವ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಡಾ. ಕೆ.ಪಿ.ಬಿ ಅವರು  ರೀ-ಎಂಜಿನಿಯರಿಂಗ್,  ಸರ್ಕಾರಿ ವ್ಯವಸ್ಥೆಯಲ್ಲಿ  ಇ-ಆಡಳಿತ, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿ.  “ಭಾರತಕ್ಕೆ ತಂತ್ರಜ್ಞಾನದ ಆದ್ಯತೆಗಳು, ಇಸ್ರೋಗಾಗಿ ತಂತ್ರಜ್ಞಾನ ಮೌಲ್ಯಮಾಪನ ಅಧ್ಯಯನ, ಪೇಟೆಂಟ್‌ಗಳು, ತಾಂತ್ರಿಕ ಬದಲಾವಣೆ ಸ್ಪರ್ಧೆ ಮತ್ತು ಕಾರ್ಯತಂತ್ರ, ಮಾದರಿ ಸಾರ್ವಜನಿಕ ವ್ಯವಹಾರ ವ್ಯವಸ್ಥೆ, ಉಪಗ್ರಹ ಮತ್ತು ಸುಧಾರಿತ ಮಲ್ಟಿಮೀಡಿಯಾ ಶಿಕ್ಷಣ, ಕೃಷಿ ವ್ಯವಸ್ಥೆಯನ್ನು  ಬಲಪಡಿಸಲು ನೀತಿ-ಚೌಕಟ್ಟು, ಆತ್ಮನಿರ್ಭಾರ ಭಾರತ್,ಆರೋಗ್ಯ ಮತ್ತು ದೂರಸ್ಥ ಪ್ರವೇಶ- ತಂತ್ರಜ್ಞಾನವನ್ನು ಮೌಲ್ಯೀಕರಿಸಲು ಪಿಎಚ್‌ಸಿಯಲ್ಲಿ ಟೆಲಿಮೆಡಿಸಿನ್ ಅಳವಡಿಕೆ,ಸಹಕಾರಿ ಆಡಳಿತ ವ್ಯವಸ್ಥೆಯನ್ನು ಉತ್ಕೃಷ್ಟಗೊಳಿಸುವುದು,ಹೀಗೆ  ಹತ್ತಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ,ಯೋಜನಬದ್ದವಾದ ಸಂಶೋಧನಾ  ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಡಾ.ಕೆ.ಪಿ.ಬಿ ರವರು  ನಮ್ಮ  ಸಮಾಜದ ಉತ್ಕೃಷ್ಟ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ಆಸ್ತಿಯಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಕೆ.ಪಿ.ಬಿ.ರವರು ಗ್ರಾಮೀಣಾಭಿವೃದ್ಧಿಗಾಗಿ ಅತೀವ  ಕಾಳಜಿಯನ್ನು  ಹೊಂದಿದ್ದು, ಶ್ರೀ  ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದ ಕೃಪಾಕಾರುಣ್ಯದಿಂದ ಎಲ್ಲರ ಮನದಲ್ಲಿ ಉಳಿಯುವ ಯೋಜನೆ ರೂಪಿಸುವಂತಾಗಲಿ  ಎಂಬ ಆಶಯದೊಂದಿಗೆ  ಶ್ರೀಯುತರಿಗೆ ಮನದುಂಬಿದ  ಅಭಿನಂದನೆಗಳು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top