ಡಿವಿಜಿ ಸುದ್ದಿ, ದಾವಣಗೆರೆ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಮೂಲಕ ದಾವಣಗೆರೆಗೆ ತಲುಪುವ ಮುಖ್ಯ ರಸ್ತೆಯು ನೂರಾರು ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಕೂಡಲೇ ಉಚ್ಚಂಗಿದುರ್ಗ-ದಾವಣಗೆರೆ ರಸ್ತೆಯ ಗುಂಡಿ ಮುಚ್ಚುವಂತೆ ಸ್ತಳೀಯರು ಆಗ್ರಹಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಉಚ್ಚಂಗಿದುರ್ಗ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಶ್ರೀ ಉತ್ಸವಾಂಭ ದೇವಿ ನೆಲಸಿದ್ದಾಳೆ. ಈ ಹಿನ್ನೆಲೆ ನಿತ್ಯ ಸಾವಿರಾರು ಭಕ್ತರು ಈ ಸನ್ನಿಧಿಗೆ ಆಗಮಿಸಿಸುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ರಸ್ತೆ ಗುಂಡಿಗಳಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಅರಸೀಕರೆಯಿಂದ ಅಣಜಿಗೆ ಹೋಗುವ ರಸ್ತೆ ಇತ್ತೀಚೆಗೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರ ಗೋಳು ಕೇಳುವವರೇ ಇಲ್ಲ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದುದ್ದು ಇದೀಗ ಲಾರಿಗಳು ಮತ್ತು ಕಾರುಗಳಲ್ಲಿ ಬರುವ ಜನರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟು ರಸ್ತೆ ಸರಿ ಮಾಡಿ ಎಂದು ಮನವಿ ಮಾಡಿದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದ ಉಚ್ಚಂಗಿದುರ್ಗ ಮತ್ತು ಅರಸಿಕೆರೆ ಹಾಗೂ ಅಣಜಿ ಕ್ರಾಸ್ ಗೆ ಹೋಗುವಂತವರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.
ಧಾರ್ಮಿಕ ಕ್ಷೇತ್ರವಾದ ಹಿನ್ನೆಲೆ ಹಬ್ಬ ಮತ್ತು ಹುಣ್ಣಿಮೆ, ಅಮಾವಸ್ಯೆಯ ದಿನ ಉಚ್ಚಂಗಿದುರ್ಗಕ್ಕೆ ನಿತ್ಯ ನೂರಾರು ಮಂದಿ ಬರುತ್ತಾರೆ ವಾಹನಗಳಲ್ಲಿ ಬರುವಂತ ಜನರಿಗೆ ನಿಜಕ್ಕೂ ತೊಂದರೆ ತಪ್ಪಿಲ್ಲ. ಉಚ್ಚಂಗಿದುರ್ಗ ಹರಪನಹಳ್ಳಿ ತಾಲ್ಲೂಕು ಆಡಳಿತಕ್ಕೆ ಒಳಪಟ್ಟರೆ ವಿಧಾನಸಭಾ ಕ್ಷೇತ್ರ ಜಗಳೂರು ಗೆ ಸೇರುತ್ತದೆ. ಈ ಗೊಂದಲದಿಂದ ಉಚ್ಚಂಗಿದುರ್ಗ ಅಭಿವೃದ್ಧಿಯಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಜಗಳೂರು ಕ್ಷೇತ್ರ ಮತ್ತು ಹರಪನಹಳ್ಳಿ ಕ್ಷೇತ್ರದ ಶಾಸಕರು ಉಚ್ಚಂಗಿದುರ್ಗದ ಅಭಿವೃದ್ಧಿಗೆ ಮುಂದಾಗಬೇಕು ಅಲ್ಲದೇ ಹದಗೆಟ್ಟ ರಸ್ತೆಯನ್ನ ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕೆಂಬುದ ಎಲ್ಲರ ಆಗ್ರಹವಾಗಿದೆ.